ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ₹ 30 ಲಕ್ಷ ದಂಡ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 11:47 IST
Last Updated 5 ಸೆಪ್ಟೆಂಬರ್ 2019, 11:47 IST
   

ಬೆಂಗಳೂರು:ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆಕೇಂದ್ರ ಮೋಟಾರು ವಾಹನ ಕಾಯ್ದೆ 2019ರ (ತಿದ್ದುಪಡಿ) ಅನ್ವಯ ನಗರದಾದ್ಯಂತ ಒಂದೇ ದಿನದಲ್ಲಿ ₹ 30 ಲಕ್ಷ ದಂಡ ವಿಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಕೇಂದ್ರದ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಸೆಪ್ಟೆಂಬರ್ 3ರಂದು ಕರ್ನಾಟಕ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ತಕ್ಷಣದಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಇದರ ಪ್ರಕಾರ, ಸೆಪ್ಟೆಂಬರ್‌ 4ರಿಂದ ದಂಡದ ಪರಿಷ್ಕೃದ ಮೊತ್ತಗಳನ್ನು ಪಿಡಿಎನಲ್ಲಿ ಅಳವಡಿಸಿಕೊಳ್ಳಲಾಗಿದೆ. ಬಳಿಕ ಸೆಪ್ಟೆಂಬರ್ 5ರ ಮಧ್ಯಾಹ್ನ 1 ಗಂಟೆಯವರೆಗೆ ನಗರದಾದ್ಯಂತ ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಒಟ್ಟು ₹ 30 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದುಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸದಿರುವುದಕ್ಕೇ ಹೆಚ್ಚು:ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಪ್ರಕರಣಗಳೇ ಹೆಚ್ಚು ದಾಖಲಾಗಿವೆ. 1,518 ಪ್ರಕರಣ ದಾಖಲಾಗಿದ್ದು, ₹ 15,18,000 ದಂಡ ಸಂಗ್ರಹಿಸಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದ 1,121 ಪ್ರಕರಣ ದಾಖಲಾಗಿದ್ದು,₹ 11,21,000ದಂಡ ಸಂಗ್ರಹಿಸಲಾಗಿದೆ.

ADVERTISEMENT

ಅಧಿಸೂಚನೆ ಹೊರಡಿಸಿದ ದಿನವಾದ ಸೆಪ್ಟೆಂಬರ್ 3ರಂದು ರಾತ್ರಿಯೇಹೊಸ ಕಾನೂನಿನ ಅನ್ವಯ ಸಂಚಾರ ಪೊಲೀಸರು ಅಧಿಕ ಮೊತ್ತದ ದಂಡ ವಿಧಿಸಿದ್ದರು.ಮದ್ಯ ಸೇವಿಸಿ ಬೈಕ್ ಚಲಾಯಿಸಿದ ವ್ಯಕ್ತಿಗೆ₹ 10 ಸಾವಿರ, ಹೆಲ್ಮೆಟ್ ಧರಿಸದ ವ್ಯಕ್ತಿಗೆ₹ 2 ಸಾವಿರ, ಮತ್ತೊಬ್ಬ ವ್ಯಕ್ತಿಗೆ₹ 17 ಸಾವಿರ ದಂಡ ವಿಧಿಸಿದ್ದರು.

ಚಾಲನಾ ಪರವಾನಗಿ ಇಲ್ಲದೆ, ಹೆಲ್ಮೆಟ್‌ ಧರಿಸದೆ, ಮದ್ಯಪಾನ ಮಾಡಿದ್ವಿಚಕ್ರ ವಾಹನ ಚಲಾಯಿಸಿದಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೆಪ್ಟೆಂಬರ್ 4ರಂದು₹ 17 ಸಾವಿರ ದಂಡ ವಿಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.