ಬೆಂಗಳೂರು: ತಮಿಳುನಾಡಿನ ಕವರೈಪೆಟ್ಟೆ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಮೈಸೂರು –ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಪರಿಣಾಮ ಶನಿವಾರ (ಅ.12) ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಮೇಲ್‌ಪಕ್ಕಂ ಹಾಗೂ ರಾಣಿಗುಂಟ ಮಾರ್ಗವಾಗಿ ರೈಲುಗಳು ಸಂಚರಿಸಲಿವೆ.
ಶನಿವಾರ ಬೆಳಿಗ್ಗೆ 8.50 ರ ಎಸ್‌ಎಂವಿಟಿ ಬೆಂಗಳೂರು– ಕಾಮಾಕ್ಯ (ರೈಲು ಸಂಖ್ಯೆ: 12551) ಎ.ಸಿ ಎಕ್ಸ್‌ಪ್ರೆಸ್ ರೈಲು ಧರ್ಮಾವರಂ, ವಿಜಯವಾಡ ಮಾರ್ಗವಾಗಿ ಚಲಿಸಲಿದೆ.ಇದರಿಂದಾಗಿ ಜೋಳರಪೆಟ್ಟೈ, ಕಟ್ಪಾಡಿ, ಪೆರಂಬೂರು ಹಾಗೂ ಗೂಡೂರು ನಿಲ್ದಾಣಗಳು ಬಿಟ್ಟು ಹೋಗಲಿವೆ.
ಬೆಳಿಗ್ಗೆ 9.15ಕ್ಕೆ ಹೊರಡುವ ಎಸ್‌ಎಂವಿಟಿ ಬೆಂಗಳೂರು–ದಾನಾಪುರ ಸಂಗಮಿತ್ರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ:12295) ರೈಲು, ಧರ್ಮಾವರಂ, ಕಾಜೀಪೇಟ್ ಮಾರ್ಗವಾಗಿ ಪ್ರಯಾಣಿಸಲಿದೆ. ಕೆ.ಆರ್. ಪುರ, ಬಂಗಾರಪೇಟೆ, ಕುಪ್ಪಂ, ಜೋಳರಪೆಟ್ಟೈ, ಕಟ್ಪಾಡಿ, ಆರಕೋಣಂ, ಪೆರಂಬೂರ್, ಗೂಡೂರ್, ನೆಲ್ಲೂರು, ಒಂಗೋಲ್, ವಿಜಯವಾಡ ಹಾಗೂ ವಾರಂಗಲ್ ನಿಲ್ದಾಣಗಳು ತಪ್ಪಲಿವೆ.
ಶುಕ್ರವಾರ ರಾತ್ರಿ 11.30ಕ್ಕೆ ಹೊರಟಿರುವ ಎಸ್‌ಎಂವಿಟಿ ಬೆಂಗಳೂರು–ಗುವಾಹಟಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12509) ಮೇಲ್ಪಕ್ಕಂ, ರಾಣಿಗುಂಟ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ. ಆರಕೋಣಂ ಹಾಗೂ ಪೆರಂಬೂರ್ ನಿಲ್ದಾಣಗಳು ತಪ್ಪಿಹೋಗಲಿದ್ದು, ಈ ರೈಲಿಗೆ ತಿರುತ್ತಣಿಯಲ್ಲಿ ಹೆಚ್ಚುವರಿ ನಿಲುಗಡೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.