ADVERTISEMENT

ತುಮಕೂರು ಮೇಯರ್ ಚುನಾವಣೆ: ಮೇಯರ್ ಆಗಿ ಫರೀದಾ ಬೇಗಂ ಅವಿರೋಧ ಆಯ್ಕೆ

ಉಪ ಮೇಯರ್ ಆಗಿ ಶಶಿಕಲಾ ಗಂಗಹನುಮಯ್ಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 8:51 IST
Last Updated 30 ಜನವರಿ 2020, 8:51 IST
ಮೇಯರ್ ಆಗಿ ಆಯ್ಕೆಯಾದ ಫರೀದಾ ಬೇಗಂ ಅವರಿಗೆ ಬಿಜೆಪಿ ಸಂಸದ ಜೆ.ಎಸ್. ಬಸವರಾಜು  ಶುಭ ಕೋರಿದರು. –ಪ್ರಜಾವಾಣಿ ಚಿತ್ರ
ಮೇಯರ್ ಆಗಿ ಆಯ್ಕೆಯಾದ ಫರೀದಾ ಬೇಗಂ ಅವರಿಗೆ ಬಿಜೆಪಿ ಸಂಸದ ಜೆ.ಎಸ್. ಬಸವರಾಜು ಶುಭ ಕೋರಿದರು. –ಪ್ರಜಾವಾಣಿ ಚಿತ್ರ   
""

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಮೇಯರ್ಆಗಿಫರೀದಾ ಬೇಗಂ ಅವರು ಅವಿರೋಧವಾಗಿಆಯ್ಕೆಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ವೀಣಾ ಬಿ.ಜಿ. ಅವರು ನಾಮಪತ್ರ ಹಿಂಪಡೆದರು. ಹಾಗಾಗಿಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು.

ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಹದಿಮೂರನೇ ವಾರ್ಡ್‌ನ ಫರಿದಾ ಬೇಗಂ ಮತ್ತು ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನ33ನೇ ವಾರ್ಡ್‌ನ ಶಶಿಕಲಾ ಗಂಗಹನುಮಯ್ಯ ಅವರು ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಪ್ರಸಾದ್ ಅವರು ಚುನಾವಣಾ ಅಧಿಕಾರಿಯಾಗಿ ಬಂದಿದ್ದರು.ಅವರೊಂದಿಗೆ ಹೆಚ್ಚುವರಿ ಆಯುಕ್ತರಾದ ವಿದ್ಯಾಕುಮಾರಿ ಉಪಸ್ಥಿತರಿದ್ದರು.

ಫರೀದಾ ಬೇಗಂ, ಶಶಿಕಲಾ ಗಂಗಹನುಮಯ್ಯ, ವೀಣಾ ಬಿ.ಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.