ADVERTISEMENT

ಪಾಕ್‌ ಪ್ರಧಾನಿ ಜತೆ ಬಿರಿಯಾನಿ ತಿನ್ನುವವರು ನೀವು: ಬಿಜೆಪಿಗೆ ತಿವಿದ ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 6:21 IST
Last Updated 23 ಜುಲೈ 2019, 6:21 IST
   

ಬೆಂಗಳೂರು: ‘ನಿಮಗೆ ದೇಶಪ್ರೇಮೆ, ಜನರ ಮೇಲೆ ಹಾಗೂ ಸಂವಿಧಾನದ ಮೇಲೆ ವಿಶ್ವಾಸವಿದ್ದರೆ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರಿಗೆ ಯಾವುದೇ ಸ್ಥಾನ ಕೊಡಬೇಡಿ’ ಎಂದು ಸಚಿವ ಯು.ಟಿ.ಖಾದರ್‌ ಬಿಜೆಪಿಗೆ ಸವಾಲು ಹಾಕಿದರು.

ರಾಜಕಾರಣದ ತಾಜಾ ಅಪ್‌ಡೇಟ್ಸ್‌ಗೆhttp://bit.ly/2yf5kaxಲಿಂಕ್ ಕ್ಲಿಕ್ ಮಾಡಿ

ಸದನದಲ್ಲಿ ಮಾತನಾಡುವಾಗಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ ಖಾದರ್, ನಮ್ಮ ಶಾಸಕರನ್ನು ಕೋಟೆಯಲ್ಲಿ ಕೂಡಿ ಹಾಕಿದ್ದೀರಿ. ನಮ್ಮ ಸಚಿವರು ಅಲ್ಲಿಗೆ ಹೋದಾಗ ಪೊಲಿಸ್‌ ಬಳಸಿ ತಡೆಯುತ್ತೀರಿ’ ಎಂದು ಆಕ್ಷೇಪಿಸಿದರು.

ADVERTISEMENT

‘ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ಕೆಂಪು ಹಾಸು ಹಾಸುತ್ತೀರಿ.ಪಾಕ್‌ ಪ್ರಧಾನಿಯ ಜೊತೆಗೆ ಬಿರಿಯಾನಿ ಊಟ ಮಾಡುತ್ತೀರಿ. ಆದರೆ ನಮಗೆ ಮಾತ್ರ ನಮ್ಮವರ ಜತೆಮತನಾಡಲುಅವಕಾಶ ಕೊಡದೆ ತಡೆಯುತ್ತೀರಿ. ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿದ್ದೀರಿ. ಇಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ’ ಎಂದು ಖಾದರ್ ತಿರುಗೇಟು ನೀಡಿದರು.

‘ಮುಂಬೈನಲ್ಲಿರುವವರನ್ನುಅತೃಪ್ತರು ಎಂದು ಬಿಂಬಿಸಿಮಾಧ್ಯಮದವರು ತಪ್ಪು ಮಾಡುತ್ತಿದ್ದಾರೆ. ವಾಸ್ತವವಾಗಿ ಅವರೆಲ್ಲರೂ ತೃಪ್ತರು.ಅವರು ಬೆಂಗಳೂರಿಗೆ ವಾಪಸ್ ಬಂದ ಮೇಲೆ ಎಲ್ಲವೂ ಬಯಲಾಗುತ್ತದೆ’ ಎಂದು ಛೇಡಿಸಿದರು.

‘ನಮ್ಮಶಾಸಕರಿಗೆ ಬಂದೂಕು ತೋರಿಸಿಬೆದರಿಸುತ್ತಿದ್ದೀರಿ. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ.ಅನುಭವಿ ವಕೀಲರಿಂದ ಅವರಿಗೆ ಮಾರ್ಗದರ್ಶನ ನೀಡಿ, ಆಮಿಷ ಒಡ್ಡಿ ಬೇರೆಡೆಗೆಕಳುಹಿಸಿದ್ದೀರಿ’ ಎಂದು ಆರೀಪಿಸಿದರು.

‘ಸುಪ್ರೀಂಕೋರ್ಟ್‌ನಲ್ಲಿರುವ ವಿಚಾರವನ್ನು ಇಲ್ಲಿ ಚರ್ಚಿಸಬೇಡಿ. ಶಾಸಕರನ್ನು ಕರೆತರುವುದು, ಇಟ್ಟುಕೊಳ್ಳುವುದು ನಿಮಗೆ ಬಿಟ್ಟದ್ದು. ಕಲಾಪವನ್ನು ಏಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ.ಈಗ ನಡೆದಿರುವುದು ನಿಮ್ಮ ಪಾರ್ಟಿಯ ಒಳ ಪ್ಯಾಪಾರ’ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು.

ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ,‘ನಮ್ಮ ಪಕ್ಷದ ಚಿಹ್ನೆಯ ಅಡಿ ಗೆದ್ದವರನ್ನು ವಾಮಮಾರ್ಗದಲ್ಲಿ ಅಪಹರಿಸಿದ್ದೀರಿ. ರಾಜೀನಾಮೆ ನೀಡಿದವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡುವುದಿಲ್ಲ ಎಂದು ನಿಮ್ಮ ರಾಜ್ಯ, ರಾಷ್ಟ್ರ ನಾಯಕರಿಂದ ಹೇಳಿಸಿ. ಈಗಲೇ, ಈ ಕ್ಷಣಕ್ಕೆ ಸಿಎಂ ಕರೆತಂದು ವಿಶ್ವಾಸಮತ ಯಾಚಿಸುತ್ತೇವೆ, ನಿರ್ಣಯ ಮಾಡುತ್ತೇವೆ. ಯಾಕೆ ಗುಟ್ಟು ಮುಚ್ಚಿಡುತ್ತಿದ್ದೀರಿ. ಯಾಕೆ ನಾಟಕ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.