ADVERTISEMENT

ಯುಕೆಪಿ: ಏಕರೂಪದ ಪರಿಹಾರಕ್ಕೆ ಒತ್ತಾಯ

ಗಾಂಧೀಜಿ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ:

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 17:48 IST
Last Updated 2 ಅಕ್ಟೋಬರ್ 2021, 17:48 IST
ಬೀಳಗಿ ತಾಲ್ಲೂಕಿನ ಅನಗವಾಡಿ ಬಳಿಯ ಘಟಪ್ರಭಾ ಸೇತುವೆಯಿಂದ ವಿಜಯಪುರ ತಾಲ್ಲೂಕು ಕೊರ್ತಿ–ಕೊಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆವರೆಗೆ ಶನಿವಾರ ನಡೆದ ’ಗಾಂಧೀಜಿ ನಡಿಗೆ ಕೃಷ್ಣೆಯ ಕಡೆಗೆ‘ ಪಾದಯಾತ್ರೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಸಾವಿರಾರು ಸಂತ್ರಸ್ತರು ಹೆಜ್ಜೆ ಹಾಕಿದರುಚಿತ್ರ: ಸಂಗಮೇಶ ಬಡಿಗೇರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನದ ವೇಳೆ ಮುಳುಗಡೆ ಆಗಲಿರುವ 1.33 ಲಕ್ಷ ಎಕರೆ ಭೂಮಿ ಹಾಗೂ 20 ಗ್ರಾಮಗಳ ಸಂತ್ರಸ್ತರಿಗೆ ಏಕರೂಪದ ಪರಿಹಾರ ಕೊಡುವಂತೆ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಶನಿವಾರ ಇಲ್ಲಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿತು.

ವೇದಿಕೆ ಆಶ್ರಯದಲ್ಲಿ ‘ಗಾಂಧೀಜಿನಡಿಗೆ ಕೃಷ್ಣೆಯ ಕಡೆಗೆ’ ಹೆಸರಿನಲ್ಲಿಬೀಳಗಿ ತಾಲ್ಲೂಕು ಅನಗವಾಡಿಯ ಘಟ ಪ್ರಭಾ ಸೇತುವೆಯಿಂದ ವಿಜಯಪುರ ಜಿಲ್ಲೆ ಕೊರ್ತಿ–ಕೊಲ್ಹಾರದ ಕೃಷ್ಣಾ ನದಿಸೇತುವೆಯವರೆಗೆ 24 ಕಿ.ಮೀ ದೂರ
ಪಾದಯಾತ್ರೆ ನಡೆಯಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT