ಕೇಂದ್ರ ಸರ್ಕಾರವು ಅನುದಾನ ಮತ್ತು ಬರ ಪರಿಹಾರದಂತಹ ನೆರವು ನೀಡಿಕೆಯಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿಯೇತರ ಪಕ್ಷಗಳ ರಾಜ್ಯ ಸರ್ಕಾರಗಳು ಆರೋಪಿಸುತ್ತಿವೆ. ಕರ್ನಾಟಕವು ಇದರ ಮುಂಚೂಣಿಯಲ್ಲಿದ್ದು, ಕೇಂದ್ರದ ಜೊತೆಗಿನ ಸಂಘರ್ಷಕ್ಕೆ ಬಿರುಸು ತುಂಬಿದೆ. ಈ ಮಧ್ಯೆ, ಕೇಂದ್ರದ ಹಲವು ಇಲಾಖೆಗಳಿಗೆ ನೀಡಲಾಗಿರುವ ಅನುದಾನದಲ್ಲಿ ದೊಡ್ಡ ಮೊತ್ತ ವೆಚ್ಚವಾಗಿಲ್ಲ ಎಂಬ ಮಾಹಿತಿಯನ್ನು ಸರ್ಕಾರವು ರಾಜ್ಯಸಭೆಯಲ್ಲಿ ನೀಡಿದೆ. ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರವು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸುತ್ತಿದೆ.
******
ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹಲವು 2023–24ನೇ ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ಅನುದಾನದಲ್ಲಿ ಗಣನೀಯ ಮೊತ್ತವನ್ನು ವೆಚ್ಚ ಮಾಡದೆ ಉಳಿಸಿಕೊಂಡಿವೆ.
ಹಣಕಾಸು ಸಚಿವಾಲಯಕ್ಕೆ ₹16.27 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಸಚಿವಾಲಯವು ಡಿಸೆಂಬರ್ ಅಂತ್ಯದ ವರೆಗೆ ಖರ್ಚು ಮಾಡಿರುವುದು ₹10.76 ಲಕ್ಷ ಕೋಟಿ ಮಾತ್ರ. ಅಲ್ಪಸಂಖ್ಯಾತ ಸಚಿವಾಲಯಕ್ಕೆ ಕೊಟ್ಟಿದ್ದು ₹2,609 ಕೋಟಿ. ಖರ್ಚು ಆಗಿರುವುದು ಬರೇ ₹343 ಕೋಟಿ. ಶಿಕ್ಷಣ ಸಚಿವಾಲಯಕ್ಕೆ ₹1.29 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದ್ದರೆ, ವಿನಿಯೋಗವಾಗಿರುವುದು ₹59,247 ಕೋಟಿಯಷ್ಟೇ.
ಕೇಂದ್ರ ಸರ್ಕಾರದ ಕಳೆದ ವರ್ಷದ ಬಜೆಟ್ ಗಾತ್ರ ₹44.90 ಲಕ್ಷ ಕೋಟಿ. ಡಿಸೆಂಬರ್ ಅಂತ್ಯದ ವರೆಗೆ ಬಳಕೆಯಾಗಿರುವುದು ₹30.40 ಲಕ್ಷ ಕೋಟಿ. ರಾಜ್ಯ ಸರ್ಕಾರಗಳಿಗೆ ಅನುದಾನ ಹಂಚಿಕೆ ಮಾಡುವ, ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಹೆಚ್ಚಿನ ಇಲಾಖೆಗಳು ಅನುದಾನ ಬಳಕೆಯಲ್ಲಿ ಹಿಂದುಳಿದಿವೆ. ಇವುಗಳು ಶೇ 50ರಿಂದ ಶೇ 60ರಷ್ಟು ಮಾತ್ರ ಹಣ ಖರ್ಚು ಮಾಡಿವೆ.
ಅನುದಾನ ಹಾಗೂ ತೆರಿಗೆ ಹಣ ಹಂಚಿಕೆಯಲ್ಲಿ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ, ಕೇರಳ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಸಿಡಿದೆದ್ದಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ‘ನನ್ನ ತೆರಿಗೆ ನನ್ನ ಹಕ್ಕು–ಚಲೋ ದಿಲ್ಲಿ’ ಹೆಸರಿನಲ್ಲಿ ಇದೇ 7ರಂದು (ಬುಧವಾರ) ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಇಂತಹ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಹಲವು ಇಲಾಖೆಗಳು ಅನುದಾನ ಬಳಕೆಯಲ್ಲಿ ಭಾರಿ ಹಿಂದುಳಿದಿರುವುದು ಮುನ್ನೆಲೆಗೆ ಬಂದಿದೆ.
ಪ್ರಮುಖ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ನಡೆಸುತ್ತಿದೆ. ಈ ಯಾತ್ರೆ ಮೂಲಕ 15 ಕೋಟಿಗೂ ಅಧಿಕ ಫಲಾನುಭವಿಗಳನ್ನು ತಲುಪಲಾಗಿದೆ ಎಂದು ಹೇಳಿಕೊಂಡಿದೆ. ಈ ಯಾತ್ರೆಯು ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಗಳಾದ ಆಯುಷ್ಮಾನ್ ಭಾರತ್, ಪಿಎಂ ಆವಾಸ್, ಪಿಎಂ ಕಿಸಾನ್ ಸಮ್ಮಾನ್‌ನ ಈಗಿರುವ ಹಾಗೂ ಹೊಸ ಫಲಾನುಭವಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಆದರೆ, ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಇಲಾಖೆಗಳ ಸಾಧನೆ ಆಶಾದಾಯಕವಾಗಿಲ್ಲ.
‘2023–24ನೇ ಸಾಲಿನಲ್ಲಿ ಅನೇಕ ಇಲಾಖೆಗಳು ಬಜೆಟ್‌ನ ಶೇ 20ರಷ್ಟು ಮೊತ್ತವನ್ನೂ ಬಳಸಿಕೊಂಡಿಲ್ಲ ಎಂಬುದು ನಿಜವೇ’ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸದಸ್ಯ ಸಂಜಯ್ ರಾವುತ್ ರಾಜ್ಯಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರದ 56 ಇಲಾಖೆಗಳು ಡಿಸೆಂಬರ್ ಅಂತ್ಯದ ವರೆಗೆ ಖರ್ಚು ಮಾಡಿರುವ ಹಣದ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒದಗಿಸಿದ್ದಾರೆ.
‘ವಿದ್ಯಾರ್ಥಿವೇತನದಂತಹ ಹಲವು ಯೋಜನೆಗಳಲ್ಲಿ ಬಹುಪಾಲು ವೆಚ್ಚವನ್ನು ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮಾಡಲಾಗುತ್ತದೆ’ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ‘ರಾಜ್ಯ ಸರ್ಕಾರಗಳು ಹಾಗೂ ಯೋಜನೆಗಳ ಅನುಷ್ಠಾನ ಮಾಡುವ ಸಂಸ್ಥೆಗಳು ಬಳಕೆ ಪ್ರಮಾಣಪತ್ರ ಸಲ್ಲಿಸದೆ ಇರುವುದು, ಖರೀದಿ ಪ್ರಕ್ರಿಯೆಯ ಹಂತದಲ್ಲಿರುವುದು ಸಹ ಕಡಿಮೆ ಹಣ ಬಳಕೆಗೆ ಕಾರಣ ಆಗಿರಬಹುದು’ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ‘ನನ್ನ ತೆರಿಗೆ ನನ್ನ ಹಕ್ಕು–ಚಲೋ ದಿಲ್ಲಿ’ ಹೆಸರಿನಲ್ಲಿ ಇದೇ 7ರಂದು (ಬುಧವಾರ) ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಇಂತಹ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಹಲವು ಇಲಾಖೆಗಳು ಅನುದಾನ ಬಳಕೆಯಲ್ಲಿ ಭಾರಿ ಹಿಂದುಳಿದಿರುವುದು ಮುನ್ನೆಲೆಗೆ ಬಂದಿದೆ.
ಪ್ರಮುಖ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ನಡೆಸುತ್ತಿದೆ. ಈ ಯಾತ್ರೆ ಮೂಲಕ 15 ಕೋಟಿಗೂ ಅಧಿಕ ಫಲಾನುಭವಿಗಳನ್ನು ತಲುಪಲಾಗಿದೆ ಎಂದು ಹೇಳಿಕೊಂಡಿದೆ. ಈ ಯಾತ್ರೆಯು ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಗಳಾದ ಆಯುಷ್ಮಾನ್ ಭಾರತ್, ಪಿಎಂ ಆವಾಸ್, ಪಿಎಂ ಕಿಸಾನ್ ಸಮ್ಮಾನ್‌ನ ಈಗಿರುವ ಹಾಗೂ ಹೊಸ ಫಲಾನುಭವಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಆದರೆ, ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಇಲಾಖೆಗಳ ಸಾಧನೆ ಆಶಾದಾಯಕವಾಗಿಲ್ಲ.
‘2023–24ನೇ ಸಾಲಿನಲ್ಲಿ ಅನೇಕ ಇಲಾಖೆಗಳು ಬಜೆಟ್‌ನ ಶೇ 20ರಷ್ಟು ಮೊತ್ತವನ್ನೂ ಬಳಸಿಕೊಂಡಿಲ್ಲ ಎಂಬುದು ನಿಜವೇ’ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸದಸ್ಯ ಸಂಜಯ್ ರಾವುತ್ ರಾಜ್ಯಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರದ 56 ಇಲಾಖೆಗಳು ಡಿಸೆಂಬರ್ ಅಂತ್ಯದ ವರೆಗೆ ಖರ್ಚು ಮಾಡಿರುವ ಹಣದ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒದಗಿಸಿದ್ದಾರೆ.
‘ವಿದ್ಯಾರ್ಥಿವೇತನದಂತಹ ಹಲವು ಯೋಜನೆಗಳಲ್ಲಿ ಬಹುಪಾಲು ವೆಚ್ಚವನ್ನು ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮಾಡಲಾಗುತ್ತದೆ’ ಎಂದು ಸಚಿವರು ಸಮಜಾಯಿಷಿ ನೀಡಿದ್ದಾರೆ. ‘ರಾಜ್ಯ ಸರ್ಕಾರಗಳು ಹಾಗೂ ಯೋಜನೆಗಳ ಅನುಷ್ಠಾನ ಮಾಡುವ ಸಂಸ್ಥೆಗಳು ಬಳಕೆ ಪ್ರಮಾಣಪತ್ರ ಸಲ್ಲಿಸದೆ ಇರುವುದು, ಖರೀದಿ ಪ್ರಕ್ರಿಯೆಯ ಹಂತದಲ್ಲಿರುವುದು ಸಹ ಕಡಿಮೆ ಹಣ ಬಳಕೆಗೆ ಕಾರಣ ಆಗಿರಬಹುದು’ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಕರ್ನಾಟಕದ ಮೇಲೆ ನಡೆಯುತ್ತಿರುವ ಆರ್ಥಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತೋಣ. ದೆಹಲಿಯ ಜಂತರ್ ಮಂತರ್‌ನಲ್ಲಿ ಬುಧವಾರ ನಡೆಯುವ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ನಮ್ಮ ಹಕ್ಕಿಗಾಗಿ ಪ್ರತಿಭಟಿಸೋಣಸಿದ್ದರಾಮಯ್ಯ
ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯದಿಂದ ಕನ್ನಡಿಗರ ಅಂತಃಸತ್ವ ಕುಗ್ಗುತ್ತಿದೆ. ಕರ್ನಾಟಕದ ಸ್ವಾಭಿಮಾನ, ಸ್ವಾವಲಂಬನೆಗೆ ಪೆಟ್ಟು ಬೀಳುತ್ತಿದೆ. ಪಕ್ಷಾತೀತವಾಗಿ, ರಾಜಕಾರಣವನ್ನು ಮೀರಿ ನಾವು ಕನ್ನಡಿಗರ ಪರ ದನಿ ಎತ್ತುವ ಸಮಯವಿದುಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನೆ ನಡೆಸಲು ಹೊರಟಿರುವ ಕಾಂಗ್ರೆಸ್ ಪಕ್ಷವು ಎರಡು ತಲೆಯ ರಾಜಕಾರಣ ಮಾಡುತ್ತಿದೆಎಚ್ಡಿಕೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.