ಚಿತ್ರದುರ್ಗ: ಕುರ್ಚಿ, ತೆವಲಿಗಾಗಿ ಮತದಾರರಿಗೆ ಎಲ್ಲವನ್ನೂ ಉಚಿತವಾಗಿ ನೀಡುವುಗಾಗಿ ಘೋಷಣೆ ಮಾಡಿದ ಕಾಂಗ್ರೆಸ್ ಭರವಸೆ ಈಡೇರಿಸಬೇಕು. ರಾಜ್ಯಗಳು ಕೇಳಿದಂತೆ ಪುಕ್ಕಟೆಯಾಗಿ ಪಡಿತರ ನೀಡಲು ಕೇಂದ್ರಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
‘ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ದೇಶದ ಎಲ್ಲರಿಗೆ ನೀಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 10 ಕೆ.ಜಿ ಅಕ್ಕಿ ನೀಡುವ ಗ್ಯಾರಂಟಿ ನೀಡಿದೆ. ಇದನ್ನು ರಾಜ್ಯ ತನ್ನದೇ ಮೂಲದಿಂದ ಹೆಚ್ಚುವರಿಯಾಗಿ ನೀಡಬೇಕು. ಭಾರತ ಆಹಾರ ನಿಗಮದ (ಎಫ್‌ಸಿಐ) ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಅಕ್ಕಿ ಉತ್ಪಾದನೆ, ಸಂಗ್ರಹ ಆಧರಿಸಿ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಪ್ರಧಾನಿ, ಎಫ್‌ಸಿಐ ಹಾಗೂ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ಸ್ವತಂತ್ರರು. ಕುರ್ಚಿ ಕಿತ್ತಾಟವನ್ನು ಬದಿಗಿಟ್ಟು ಗ್ಯಾರಂಟಿ ಈಡೇರಿಸುವ ಬಗ್ಗೆ ಚರ್ಚಿಸಿ. ಕೇಂದ್ರ, ಪಂಜಾಬ್, ಛತೀಸ್‌ಗಡ ಸರ್ಕಾರದ ನೆಪ ಹೇಳುವ ಬದಲು ಕೊಟ್ಟ ಮಾತಿನಂತೆ ಅಕ್ಕಿ ವಿತರಿಸಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.