ADVERTISEMENT

ರಾಜ್ಯಕ್ಕೆ ಕೇಳಿದಷ್ಟು ಅಕ್ಕಿ ಕೊಡಲು ಸಿದ್ಧ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:14 IST
Last Updated 1 ಆಗಸ್ಟ್ 2024, 16:14 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ನವದೆಹಲಿ: ಕರ್ನಾಟಕ ಸರ್ಕಾರ ಸೇರಿದಂತೆ ಯಾವುದೇ ಸರ್ಕಾರ ಕೇಳಿದಷ್ಟು ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. 

ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕಳೆದ ವರ್ಷ ವಿಶ್ವದಾದ್ಯಂತ ಬರಗಾಲದ ಪರಿಸ್ಥಿತಿ ಇತ್ತು. ಸಾಕಷ್ಟು ಅಕ್ಕಿ ದಾಸ್ತಾನು ಇರಲಿಲ್ಲ. ಈ ಸಲ ಅಂತಹ ಸಮಸ್ಯೆ ಇಲ್ಲ. ಪ್ರತಿ ಕೆ.ಜಿ. ಅಕ್ಕಿಗೆ ಕಳೆದ ವರ್ಷ ₹34 ನಿಗದಿ ಮಾಡಲಾಗಿತ್ತು. ಈಗ ₹28 ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯಗಳು ಇ–ಹರಾಜಿನಲ್ಲಿ ಭಾಗವಹಿಸದೆಯೇ ನೇರವಾಗಿ ಭಾರತೀಯ ಆಹಾರ ನಿಗಮದಿಂದ ಖರೀದಿ ಮಾಡಬಹುದು’ ಎಂದರು. 

‘ಕರ್ನಾಟಕ ಸರ್ಕಾರ ಈಗ ಅಕ್ಕಿ ಬದಲು ಹಣ ನೀಡುತ್ತಿದೆ. ಅಕ್ಕಿಗಾಗಿ ರಾಜ್ಯದಿಂದ ಹೊಸದಾಗಿ ಪ್ರಸ್ತಾವನೆ ಬಂದಿಲ್ಲ. ಅಕ್ಕಿ ಖರೀದಿ ಮಾಡಲು ಅವರಲ್ಲಿ ಹಣ ಇದೆಯಾ ಎಂಬುದು ಪ್ರಶ್ನೆ’ ಎಂದು ವ್ಯಂಗ್ಯವಾಗಿ ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.