ತುಮಕೂರು: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಐ.ಟಿ ಸೆಲ್ ಉದ್ದೇಶಪೂರ್ವಕವಾಗಿ ಉರಿಗೌಡ, ನಂಜೇಗೌಡ ಹೆಸರಿನ ಪಾತ್ರಗಳನ್ನು ಸೃಷ್ಟಿಸಿ, ಅನವಶ್ಯಕ ಚರ್ಚೆ ಹುಟ್ಟುಹಾಕಿದೆ ಎಂದು ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ಟೀಕಿಸಿದರು.
ರಾಜ್ಯ ವಿಧಾನಸಭಾ ಚುನಾವಣಾ ಜಾಗೃತಿ ಬಳಗವು ಭಾನುವಾರ ಇಲ್ಲಿ ‘ದ್ವೇಷ ರಾಜಕಾರಣ ಸೋಲಿಸಿ-ಸಂವಿಧಾನ ಉಳಿಸಿ’ ಕುರಿತು ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಪ್ರಜಾಪ್ರಭುತ್ವ ತುರ್ತು ನಿಗಾ ಘಟಕದಲ್ಲಿದೆ (ಐಸಿಯು). ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಭಾರತದಲ್ಲಿ ಮತ್ತೆ ಸನಾತನ ಮನುಧರ್ಮ ಜಾರಿಗೊಳಿಸಲು ಬಿಜೆಪಿ ಮುಂದಾಗಿದೆ. ನಾವು ಈ ನೆಲದ ಸಿದ್ಧಾಂತದ ಮೇಲೆ ದೇಶ ಕಟ್ಟಬೇಕು’ ಎಂದರು.
‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆರ್‌ಎಸ್‌ಎಸ್ 700 ಪ್ರಚಾರಕರನ್ನು ನೇಮಿಸಿದೆ. ಈ ಸಂವಿಧಾನ ವಿರೋಧಿ ಸೈನಿಕರ ನೇಮಕ ಆತಂಕಕಾರಿ ಬೆಳವಣಿಗೆ’ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.