ADVERTISEMENT

ಬಿಸಿಯೂಟಕ್ಕೆ ಉಪ್ಪು ಬಳಕೆ: ಸಿಬ್ಬಂದಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:57 IST
Last Updated 8 ಅಕ್ಟೋಬರ್ 2024, 15:57 IST
<div class="paragraphs"><p>ಉಪ್ಪು (ಸಾಂಕೇತಿಕ ಚಿತ್ರ)&nbsp;</p></div>

ಉಪ್ಪು (ಸಾಂಕೇತಿಕ ಚಿತ್ರ) 

   

ಬೆಂಗಳೂರು: ಅಧಿಕ ಉಪ್ಪು ಸೇವಿಸುವ ಮಕ್ಕಳು ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ, ಬಿಸಿಯೂಟ ತಯಾರಕರಿಗೆ ತರಬೇತಿ ನೀಡಲು ಮುಂದಾಗಿದೆ.

ಬಿಸಿಯೂಟಕ್ಕಾಗಿ ಸಿದ್ಧಪಡಿಸುವ ಅಡುಗೆಗೆ ಸಮತೋಲನ ಪ್ರಮಾಣದಲ್ಲಿ ಉಪ್ಪನ್ನು ಬಳಸುವ ಕುರಿತು ತರಬೇತಿ ನೀಡಲು ‘ವಿಷನ್‌ ಫಾರ್‌ ಸೋಶಿಯಲ್‌ ಡೆವಲಪ್‌ಮೆಂಟ್‌’ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ತರಬೇತಿ ನೀಡುವ ಕಾರ್ಯಕ್ರಮಕ್ಕೆ ಧಾರವಾಡದಲ್ಲಿ ಚಾಲನೆ ನೀಡಲಾಗುತ್ತಿದೆ.

ADVERTISEMENT

ಸಂಸ್ಥೆ ಈಗಾಗಲೇ ಬೆಂಗಳೂರು ಮತ್ತು ಮೈಸೂರಿನ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. 5,000 ಮಕ್ಕಳು, 500 ಶಿಕ್ಷಕರ ಅಭಿಪ್ರಾಯ ಪಡೆದು, 200 ಅಡುಗೆ ಸಿಬ್ಬಂದಿಗೆ ತರಬೇತಿ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಯಸ್ಕರು ದಿನಕ್ಕೆ 5 ಗ್ರಾಂಗಿಂತ ಕಡಿಮೆ ಪ್ರಮಾಣದಲ್ಲಿ ಉಪ್ಪು ಬಳಸಬೇಕು. ಆದರೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವಾಗ ಉಪ್ಪನ್ನು ಬಳಸುವ ಕುರಿತು ಯಾವುದೇ ನಿಶ್ಚಿತ ಮಾರ್ಗಸೂಚಿಗಳಿಲ್ಲ. ಕೆಲವು ಭಾಗಗಳಲ್ಲಿ ಸರಳ ಅನ್ನವನ್ನು ಬೇಯಿಸಲು ಸಹ ಉಪ್ಪನ್ನು ಹಾಕುತ್ತಾರೆ. ಕೆಲವರು ಅಧಿಕ ಪ್ರಮಾಣದಲ್ಲಿ ಉಪ್ಪು ಬಳಸುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.