ADVERTISEMENT

ವಿಧಾನ ಮಂಡಲ: ಸ್ಥಾಯಿ ಸಮಿತಿಗಳಿಗೆ ನಾಮನಿರ್ದೇಶನ ಮಾಡಿದ ಯು.ಟಿ ಖಾದರ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 14:22 IST
Last Updated 29 ಸೆಪ್ಟೆಂಬರ್ 2024, 14:22 IST
<div class="paragraphs"><p>ಯು.ಟಿ ಖಾದರ್‌</p></div>

ಯು.ಟಿ ಖಾದರ್‌

   

ಬೆಂಗಳೂರು: ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ 2024–25ನೇ ಸಾಲಿಗೆ ಅಧ್ಯಕ್ಷರು, ಸದಸ್ಯರನ್ನು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್‌ ಅವರು ನಾಮನಿರ್ದೇಶನ ಮಾಡಿದ್ದಾರೆ.

ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು– ಸಿ.ಸಿ. ಪಾಟೀಲ (ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ), ಬಸವರಾಜ್‌ ಶಿವಣ್ಣನವರ್ (ಸಾರ್ವಜನಿಕ ಉದ್ದಿಮೆಗಳ ಸಮಿತಿ), ಪಿ.ಎಂ. ನರೇಂದ್ರಸ್ವಾಮಿ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ), ಎ.ಆರ್‌. ಕೃಷ್ಣಮೂರ್ತಿ (ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ), ಬಿ. ಶಿವಣ್ಣ (ಅಧೀನ ಶಾಸನ ರಚನಾ ಸಮಿತಿ), ಎಚ್‌.ಡಿ. ರೇವಣ್ಣ (ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ), ಎನ್‌.ಎಚ್‌. ಕೋನರಡ್ಡಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ) ಅವರನ್ನು ನೇಮಿಸಲಾಗಿದೆ.

ADVERTISEMENT

ಉಳಿದಂತೆ, ಗ್ರಂಥಾಲಯ ಸಮಿತಿಗೆ ಯು.ಬಿ. ಬಣಕಾರ್‌, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ರಾಜ್‌ ಸಂಸ್ಥೆಗಳ ಸಮಿತಿಗೆ ರಿಜ್ವಾನ್‌ ಅರ್ಷದ್‌, ಅಂದಾಜುಗಳ ಸಮಿತಿಗೆ ಹಂಪನಗೌಡ ಬಾದರ್ಲಿ, ಸರ್ಕಾರಿ ಭರವಸೆಗಳ ಸಮಿತಿಗೆ ಕೆ.ವೈ.ನಂಜೇಗೌಡ, ಹಕ್ಕುಬಾಧ್ಯತೆಗಳ ಸಮಿತಿಗೆ ಶಿವಾನಂದ ಮಹಾಂತೇಶ ಕೌಜಲಗಿ, ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಹಾಗೂ ವಸತಿ ಸೌಕರ್ಯಗಳ ಸಮಿತಿಗೆ ರುದ್ರಪ್ಪ ಲಮಾಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ಎಲ್ಲ ಸಮಿತಿಗಳಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ವಿಧಾನಸಭೆ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.