ADVERTISEMENT

ಯುವಿಸಿಇ ನಿರ್ದೇಶಕ ಮಂಜುನಾಥ್ ಅಸಮಂಜಸ ಬೇಡಿಕೆಗಳನ್ನು ಇಟ್ಟಿಲ್ಲ: ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 15:46 IST
Last Updated 11 ಫೆಬ್ರುವರಿ 2024, 15:46 IST
ಯುವಿಸಿಇ
ಯುವಿಸಿಇ   

ಬೆಂಗಳೂರು: ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ನಿರ್ದೇಶಕ ಸ್ಥಾನಕ್ಕೆ ನೇಮಕವಾಗಿರುವ ಬಾಂಬೆ ಐಐಟಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಿ. ಮಂಜುನಾಥ್ ಅವರು ತಮ್ಮ ವೇತನದ ಬಗ್ಗೆ ಯಾವುದೇ ಅಸಮಂಜಸ ಬೇಡಿಕೆಗಳನ್ನು ಇಟ್ಟಿಲ್ಲ’ ಎಂದು ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಬಿ. ಮುತ್ತುರಾಮನ್‌ ತಿಳಿಸಿದ್ದಾರೆ.

ಮಂಜುನಾಥ್ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಕಟಗೊಂಡಿದ್ದ ವರದಿಗಳಿಗೆ ಸ್ಪಷ್ಟನೆ ನೀಡಿರುವ ಅವರು, ‘ಕ್ಲಬ್‌ ಸದಸ್ಯತ್ವ ಹೊರತುಪಡಿಸಿ ಅವರ ಇತರ ಎಲ್ಲ ಬೇಡಿಕೆಗಳು ಪ್ರಸ್ತುತ ಈಗಾಗಲೇ ಅವರು ಉದ್ಯೋಗದಲ್ಲಿ ಪಡೆಯುತ್ತಿದ್ದಾರೆ. ಅಲ್ಲದೆ, ವಿಮಾನದಲ್ಲಿ ವ್ಯಾಪಾರ ವರ್ಗದ ಪ್ರಯಾಣವು ಸೇರಿದಂತೆ ಪ್ರಸ್ತುತ ಪಡೆಯುತ್ತಿರುವ ಯಾವುದೇ ಸವಲತ್ತುಗಳನ್ನು ವಿವೇಚನೆಯಿಂದ ಬಳಸಿಕೊಳ್ಳುವುದಾಗಿ ತಮ್ಮ ಪತ್ರ ವ್ಯವಹಾರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ’ ಎಂದಿದ್ದಾರೆ.

‘ಕ್ಲಬ್‌ ಸದಸ್ಯತ್ವ ವಿಷಯವನ್ನು ಹಿಂದಿನ ಚರ್ಚೆಯ ಉಲ್ಲೇಖವೆಂದು ಅವರು ಬೇಡಿಕೆಯಲ್ಲಿ ಪಟ್ಟಿ ಮಾಡಿದ್ದಾರೆ. ಯುವಿಸಿಇ ನಿರ್ದೇಶಕರಿಗೆ ಕಾರ್ಪೊರೇಟ್‌ ಸದಸ್ಯತ್ವವಾಗಿ ಉದ್ದೇಶಿಸಲಾದ ಈ ಸದಸ್ಯತ್ವವನ್ನು ಖಾಸಗಿ ಫಂಡಿಂಗ್‌ ಲಭ್ಯವಿದ್ದರೆ ಮಾತ್ರ ಪಡೆಯಲಾಗುತ್ತದೆ. ಸರ್ಕಾರಕ್ಕೆ ಯಾವುದೇ ಹಣಕಾಸಿನ ಹೊರೆ ಆಗದಂತೆ ಕ್ರಮ ವಹಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.