ADVERTISEMENT

ವಾಲ್ಮೀಕಿ ಸಮುದಾಯದ ಮೀಸಲಾತಿ ವಿಚಾರ: ಸರ್ಕಾರದ ವಿರುದ್ಧವೇ ರಾಜು ಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 2:31 IST
Last Updated 24 ಸೆಪ್ಟೆಂಬರ್ 2021, 2:31 IST
ಬಿಜೆಪಿ ಸದಸ್ಯ ರಾಜು ಗೌಡ
ಬಿಜೆಪಿ ಸದಸ್ಯ ರಾಜು ಗೌಡ   

ಬೆಂಗಳೂರು:‘ಶ್ರೀರಾಮನ ಹೆಸರಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡಲು ಹಿಂದೇಟು ಹಾಕುತ್ತಿದೆ’ ಎಂದು ಬಿಜೆಪಿ ಸದಸ್ಯ ರಾಜು ಗೌಡ (ನರಸಿಂಹ ನಾಯಕ್‌) ಆಕ್ರೋಶ ವ್ಯಕ್ತಪಡಿಸಿದರು.

ಶೂನ್ಯ ವೇಳೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ರಾಜು ಗೌಡ ಎದ್ದು ನಿಂತರು. ಅದಕ್ಕೆ ಸಭಾಧ್ಯಕ್ಷರು ಅವಕಾಶ ನೀಡಲಿಲ್ಲ. ‘ಎಷ್ಟು ಸಲ ಬೇಕಾದರೂ ಮಾತನಾಡಲುಕೆ.ಆರ್.ರಮೇಶ್‌ ಕುಮಾರ್‌ ಅವರಿಗೆ ಸಭಾಧ್ಯಕ್ಷರು ಅವಕಾಶ ನೀಡುತ್ತಾರೆ’ ಎಂದು ರಾಜು ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜು ಗೌಡ ಪ್ರಸ್ತಾಪಿಸುತ್ತಿರುವ ವಿಷಯ ಗಂಭೀರವಾದುದು. ಅವರಿಗೆ ಅವಕಾಶ ನೀಡಿ’ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ವಿನಂತಿಸಿದರು.

ADVERTISEMENT

‘ನನ್ನ ಮೇಲೆಯೇ ರಾಜು ಗೌಡ ಆರೋಪ ಮಾಡಿ ಅಶಿಸ್ತು ತೋರಿದ್ದಾರೆ. ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿದ್ದಾರೆ’ ಎಂದು ಕಾಗೇರಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದು ರಾಜು ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.