ADVERTISEMENT

ವಾಲ್ಮೀಕಿ ನಿಗಮದ ಅಧ್ಯಕ್ಷ ದದ್ದಲ್‌ಗೆ ED ಕಚೇರಿಯಲ್ಲಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 10:14 IST
Last Updated 18 ಜುಲೈ 2024, 10:14 IST
<div class="paragraphs"><p>ಬಸನಗೌಡ ದದ್ದಲ್‌, ಬಿ.ನಾಗೇಂದ್ರ&nbsp;</p></div>

ಬಸನಗೌಡ ದದ್ದಲ್‌, ಬಿ.ನಾಗೇಂದ್ರ 

   

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ನಿಗಮದ ಅಧ್ಯಕ್ಷ ಮತ್ತು ಕಾಂಗ್ರೆಸ್‌ ಶಾಸಕ ಬಸನಗೌಡ ದದ್ದಲ್‌ ಅವರನ್ನು ಜಾರಿ ನಿರ್ದೇಶನಾಲಯವು ಗುರುವಾರ ವಿಚಾರಣೆಗೆ ಒಳಪಡಿಸಿದೆ.

ನಗರದ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕಚೇರಿಗೆ ಹಾಜರಾಗುವಂತೆ ದದ್ದಲ್‌ ಅವರಿಗೆ ನಿರ್ದೇಶನಾಲಯವು ಸೂಚಿಸಿತ್ತು. ಅದರಂತೆ ಗುರುವಾರ ಬೆಳಿಗ್ಗೆ 11.30ರ ವೇಳೆಗೆ ಅವರು ಇ.ಡಿ ಕಚೇರಿಗೆ ಹಾಜರಾಗಿದ್ದಾರೆ. ಕಚೇರಿಯಲ್ಲೇ ಅವರ ವಿಚಾರಣೆ ಮುಂದುವರಿದಿದೆ.

ADVERTISEMENT

ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಕಸ್ಟಡಿಗೆ ಪಡೆದಿದ್ದ ಇ.ಡಿ, ವಿಚಾರಣೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರ ಪತ್ನಿ ಮಂಜುಳಾ ಆರ್. ಅವರನ್ನೂ ಜಾರಿ ನಿರ್ದೇಶನಾಲಯವು ಬುಧವಾರ ವಶಕ್ಕೆ ಪಡೆದು ಶಾಂತಿನಗರದ ಕಚೇರಿ ಕರೆತಂದಿತ್ತು. ಸಂಜೆಯವರೆಗೆ ವಿಚಾರಣೆ ನಡೆಸಿ, ಅವರನ್ನು ಬಿಟ್ಟು ಕಳುಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.