ADVERTISEMENT

Valmiki Jayanti 2024 | ವಾಲ್ಮೀಕಿ ಜಯಂತಿ: ಗಣ್ಯರಿಂದ ಶುಭಾಶಯಗಳ ಮಹಾಪೂರ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2024, 4:39 IST
Last Updated 17 ಅಕ್ಟೋಬರ್ 2024, 4:39 IST
<div class="paragraphs"><p>ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ</p></div>

ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ

   

ಬೆಂಗಳೂರು: ಮಹಾ ಕವಿ ವಾಲ್ಮೀಕಿ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಎಲ್ಲರಿಗೂ ವಾಲ್ಮೀಕಿ ಜನ್ಮದಿನದ ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ADVERTISEMENT

ಪ್ರತಿಭೆ ಹುಟ್ಟಿನ ಉಡುಗೊರೆ ಅಲ್ಲ, ಸಾಧನೆಯ ಗಳಿಕೆ ಎನ್ನುವುದನ್ನು ರಾಮಾಯಣ ಮಹಾಕಾವ್ಯ ಬರೆದು ತೋರಿಸಿದ ದಲಿತ ಪ್ರತಿಭೆ, ಆದಿ ಕವಿ ವಾಲ್ಮೀಕಿಯವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಲಿ. ಕಟ್ಟುಕತೆಗಳಿಂದ ಹುಟ್ಟಿಕೊಂಡಿರುವ ಪೂರ್ವಗ್ರಹಗಳನ್ನು ಪಕ್ಕಕ್ಕಿಟ್ಟು ಈ ಸಾಧಕನ ನಿಜ ಜೀವನಗಾಥೆಯ ಅಧ್ಯಯನ ತಳಸಮುದಾಯಗಳ ಕೋಟ್ಯಂತರ ಪ್ರತಿಭೆಗಳಿಗೆ ಸ್ಪೂರ್ತಿ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸಬಹುದು. ನಾಡಬಾಂಧವರಿಗೆಲ್ಲರಿಗೂ ಮಹಾ ಕವಿ ವಾಲ್ಮೀಕಿ ಜನ್ಮದಿನದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್‌ ಮಾಡಿದ್ದಾರೆ.

ವಾಲ್ಮೀಕಿ ಜಯಂತಿ ಅಂಗವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೆಹಲಿಯ ಮಂದಿರಾ ಮಾರ್ಗದಲ್ಲಿರುವ ವಾಲ್ಮೀಕಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮಹರ್ಷಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಎಲ್ಲಾ ದೇಶಬಾಂಧವರಿಗೆ ಹಾರ್ದಿಕ ಶುಭಾಶಯಗಳು! ಆದಿಕವಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣವು ಮಾನವ ಸಮಾಜಕ್ಕೆ ಶ್ರೀರಾಮನ ದೈವಿಕ ಕಥೆಯನ್ನು ಉಡುಗೊರೆಯಾಗಿ ನೀಡಿದೆ. ಮಾನವ ಆದರ್ಶಗಳ ವಿಶಿಷ್ಟ ಚಿತ್ರಣ ರಾಮಾಯಣದಲ್ಲಿ ಕಂಡುಬರುತ್ತದೆ. ಪ್ರತಿಯೊಬ್ಬರೂ ಆದಿಕವಿ ವರ್ಣಿಸಿದ ಆದರ್ಶಗಳ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಮನುಕುಲದ ಮಹಾಕಾವ್ಯ ರಾಮಾಯಣದ ಕರ್ತೃವಾಗಿರುವ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಈ ದಿನದಂದು ಆ ಆದಿಕವಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ಈ ಪುಣ್ಯದಿನದ ನಿಮಿತ್ತ ಎಲ್ಲರಿಗೂ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ಜೆಡಿಎಸ್‌ ಮುಖಂಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಾಡಿನ ಸಮಸ್ತ ಜನತೆಗೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ಭಾರತದ ಮೊಟ್ಟ ಮೊದಲ ಮಹಾಕಾವ್ಯ, ಪವಿತ್ರವಾದ ರಾಮಾಯಣದ ಮೂಲಕ ಜಗತ್ತಿಗೆ ಜೀವನ ಮೌಲ್ಯಗಳನ್ನು ತಿಳಿಸಿದ ಕರ್ತೃ ಮಹರ್ಷಿ ವಾಲ್ಮೀಕಿ ಅವರನ್ನು ಸದಾಕಾಲ ಸ್ಮರಿಸೋಣ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.