ADVERTISEMENT

ವರ್ಣಗಳು ಜಾತಿಗಳಲ್ಲ, ಮನು ಬ್ರಾಹ್ಮಣನಲ್ಲ: ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:37 IST
Last Updated 12 ಆಗಸ್ಟ್ 2024, 15:37 IST
<div class="paragraphs"><p>ಹೈಕೋರ್ಟ್‌ನ ಹಿರಿಯ ವಕೀಲ ಡಿ.ಎಲ್‌.ಎನ್‌.ರಾವ್‌, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ, ಆಂಧ್ರಪ್ರದೇಶದ ರಾಜ್ಯಪಾಲರಾದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌,&nbsp;ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ತಾರಕರಾಮ್‌ ಸಹೋದರ&nbsp;ನಟರಾಜ್‌&nbsp;ಇದ್ದರು</p></div>

ಹೈಕೋರ್ಟ್‌ನ ಹಿರಿಯ ವಕೀಲ ಡಿ.ಎಲ್‌.ಎನ್‌.ರಾವ್‌, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ, ಆಂಧ್ರಪ್ರದೇಶದ ರಾಜ್ಯಪಾಲರಾದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌, ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ತಾರಕರಾಮ್‌ ಸಹೋದರ ನಟರಾಜ್‌ ಇದ್ದರು

   

– ‍ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವರ್ಣಗಳು ಜಾತಿಗಳಲ್ಲ. ಮನು ಬ್ರಾಹ್ಮಣ ಅಲ್ಲ. ಅದೊಂದು ಹುದ್ದೆ. ಮನುಸ್ಮೃತಿ ಅನೇಕ ಹಿರಿದಾದ ತತ್ವಗಳನ್ನು ಒಳಗೊಂಡಿದೆ. ಭಾರತದ ಮಹಾಕಾವ್ಯಗಳು, ವೇದ, ಉಪನಿಷತ್ತುಗಳು ಅತಿ ಶೂದ್ರರಿಂದಲೇ ರಚಿತವಾಗಿವೆ. ಖಡ್ಗ ಸಂಸ್ಕಾರದಿಂದ ಶೂದ್ರರು, ರಾಜರೂ ಆಗಿ ಹೋಗಿದ್ದಾರೆ. ವಿಶ್ವದ ಬೇರೆಲ್ಲಾ ಧರ್ಮಗಳಿಗಿಂತಲೂ ನಮ್ಮ ಕಾನೂನುಗಳು ರೂಪುಗೊಳ್ಳುವಲ್ಲಿ ಹಿಂದೂ ಧರ್ಮದ ಹಿರಿಮೆ ಸದಾ ಗಾಢವಾದ ಪಾತ್ರ ವಹಿಸಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅಭಿಪ್ರಾಯಪಟ್ಟರು.

ADVERTISEMENT

ಹೈಕೋರ್ಟ್‌ನ ಹಿರಿಯ ವಕೀಲ ವಿ.ತಾರಕರಾಮ್‌ ಅವರ ಸ್ಮರಣಾರ್ಥ ಸೋಮವಾರ ಆಯೋಜಿಸಲಾಗಿದ್ದ ‘ಕಾನೂನು ಮತ್ತು ಧರ್ಮ’ ವಿಷಯದ ಮೇಲೆ ಉಪನ್ಯಾಸ ನೀಡಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌, ‘ಎಲ್ಲ ದೇಶಗಳಲ್ಲಿನ ಕಾನೂನುಗಳೂ ಸ್ಥಳೀಯ ಶಾಸನಗಳು, ಆಚರಣೆ ಮತ್ತು ಪೂರ್ವನಿದರ್ಶನಗಳ ತಹಳಹದಿಯ ಮೇಲೆ ರೂಪುಗೊಳ್ಳುತ್ತಾ ಬಂದಿವೆ. ತರತಮಗಳಿಲ್ಲದ ವ್ಯವಸ್ಥೆಯೇ ಧರ್ಮ’ ಎಂದರು.

‘ಎಲ್ಲ ಧರ್ಮಗಳಲ್ಲೂ ಕರ್ಮಠರಿದ್ದಾರೆ. ಅವರ ಪ್ರಮಾಣ ಹೆಚ್ಚು ಕಡಿಮೆ ಇದೆ ಅಷ್ಟೇ. ಧರ್ಮ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ. ಅದಕ್ಕೆಂದೇ ಕಾರ್ಲ್‌ ಮಾರ್ಕ್ಸ್‌ ಧರ್ಮ ಅಫೀಮು ಇದ್ದಂತೆ ಎಂದ. ಆದಾಗ್ಯೂ ಯಾವುದೇ ಧರ್ಮವೂ ಟೀಕೆಗೆ ಹೊರತಾಗಿಲ್ಲ. ಯುದ್ಧ ಆರಂಭಕ್ಕೂ ಮುನ್ನ ಯುದ್ಧದ ನಿಯಮಗಳನ್ನು ರೂಪಿಸಿಕೊಂಡ ಬಗೆಯನ್ನು ಮಹಾಭಾರತದಲ್ಲಿ ಕಾಣಬಹುದು. ಆದರೆ, ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ಸಲ್ಲುತ್ತದೆ ಎಂಬ ನೀತಿ ಯುರೋಪಿನದ್ದು’ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿಗಳು, ಹಿರಿ–ಕಿರಿಯ ವಕೀಲರು, ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್‌ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.