ADVERTISEMENT

ವಿಧಾನಸೌಧ ಎದುರೇ ರಸ್ತೆ ಕುಸಿತ: ಆತಂಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:04 IST
Last Updated 16 ಸೆಪ್ಟೆಂಬರ್ 2021, 20:04 IST
ವಿಧಾನಸೌಧ ಎದುರು ರಸ್ತೆ ಕುಸಿದಿದ್ದ ಸ್ಥಳ
ವಿಧಾನಸೌಧ ಎದುರು ರಸ್ತೆ ಕುಸಿದಿದ್ದ ಸ್ಥಳ   

ಬೆಂಗಳೂರು: ವಿಧಾನಸೌಧ ಕೆಂಗಲ್ ಗೇಟ್‌ ಎದುರಿನ ರಸ್ತೆಯಲ್ಲಿ ಡಾಂಬರು ಕುಸಿದು ದೊಡ್ಡ ರಂಧ್ರ ಬಿದ್ದಿದ್ದರಿಂದ ಸ್ಥಳದಲ್ಲಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು.

ಅಧಿವೇಶನ ನಡೆಯುತ್ತಿದ್ದರಿಂದ ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆ ಇದೆ. ಇದರ ನಡುವೆಯೇ ಸಾಕಷ್ಟು ಮಂದಿ, ವಿಧಾನಸೌಧ ಅಕ್ಕ–ಪಕ್ಕದಲ್ಲಿ ಓಡಾಡುತ್ತಿದ್ದಾರೆ. ಕೆಂಗಲ್ ಗೇಟ್‌ ಎದುರೇ ಗುರುವಾರ ಸಂಜೆ ಡಾಂಬರು ಕಿತ್ತು ರಸ್ತೆ ಕುಸಿದಿತ್ತು. ರಸ್ತೆಯ ಕೆಳಭಾಗದಲ್ಲಿ ಗುಹೆ ಆಕಾರದ ಜಾಗ ಕಂಡಿತ್ತು. ಕುಸಿದ ಸ್ಥಳವನ್ನು ಗಮನಿಸಿದ ಪೊಲೀಸರು, ಸುತ್ತಮುತ್ತ ಬ್ಯಾರಿಕೇಡ್ ನಿಲ್ಲಿಸಿದರು. ಸ್ಥಳದ ಬಳಿ ಯಾರೂ ಸಂಚರಿಸದಂತೆ ತಡೆದರು.

‘ರಸ್ತೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ವಾಹನಗಳ ಓಡಾಟ ಹೆಚ್ಚಿತ್ತು. ಸಂಜೆ ರಸ್ತೆ ಕುಸಿದಿದ್ದರಿಂದ ಆತಂಕ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಉಂಟಾಗಿಲ್ಲ. ರಸ್ತೆ ಕುಸಿತಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಕಳಪೆ ಕಾಮಗಾರಿ ಕಾರಣವಿರಬಹುದು. ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಅವರಿಗೆ ಮಾಹಿತಿ ನೀಡಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.