ಬೆಂಗಳೂರು: ವಿಧಾನಸಭೆ ಅಧಿವೇಶನ ಮುಂಜಾನೆ 10.05ಕ್ಕೆ ಆರಂಭವಾಯಿತು. ಸ್ಪೀಕರ್ ಮತ್ತು ಬಿಜೆಪಿ ಶಾಸಕರು ಸದನಕ್ಕೆ ಬಂದರೂ, ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಸದನದಲ್ಲಿ ಕಾಣಿಸಲಿಲ್ಲ.
ರಾಜಕಾರಣದ ತಾಜಾ ಅಪ್‌ಡೇಟ್ಸ್‌ಗೆhttp://bit.ly/2yf5kax ಲಿಂಕ್ ಕ್ಲಿಕ್ ಮಾಡಿ
ವಿಧಾನಸೌಧಕ್ಕೆ ಹೊರಡುವ ಮೊದಲು ಮನೆಯ ಸಮೀಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್‌ಕುಮಾರ್, ‘ಶಾಸಕರು ಬರೋದು ಬಿಡೋಡು ಅವರಗೆ ಬಿಟ್ಟದ್ದು, ನನ್ನ ಕರ್ತವ್ಯ ನಾನು ಮಾಡುವೆ. ತಿಳಿವಳಿಕೆ ಕೊರತೆಗೆ ನಾನೇನು ಮಾಡಲು ಸಾಧ್ಯ? ರಾಜೀನಾಮೆ ಹೇಗೆ ಕೊಡಬೇಕು?ಸ್ಪೀಕರ್ ನೋಟಿಸ್ ಯಾಕೆ ಕೊಡ್ತಾರೆ? ಎನ್ನುವ ತಿಳಿವಳಿಕೆ ಇಲ್ಲ.ಶಾಸಕರಾಗಿ ಮೇರೆಯೋಕೆ ಬರ್ತಾರಾ’ ಎಂದು ರಮೇಶ್‌ಕುಮಾರ್ ಖಾರವಾಗಿ ಪ್ರಶ್ನಿಸಿದರು.
ಮತ್ತೊಂದೆಡೆಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಎನ್.ರವಿಕುಮಾರ್ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ವಾತಾವರಣ ಇಂದು ನಿರ್ಮಾಣವಾಗಿದೆ.ಕುಮಾರಸ್ವಾಮಿ ಮನೆಗೆ ಹೋಗ್ತಾರೆ’ ಎಂದರು.
ಯಲಹಂಕದಲ್ಲಿನ ರಮಡಾ ರೆಸಾರ್ಟ್‌ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಸದನಕ್ಕೆ ಹಾಜರಾಗಲು ಮುಂಜಾನೆಯೇ ಬಸ್‌ಗಳು ಮತ್ತು ಖಾಸಗಿ ವಾಹನಗಳಲ್ಲಿ ಹೊರಟು ಬಂದರು.
‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.