ADVERTISEMENT

ಮೈಸೂರಿನಲ್ಲಿ ಸಚಿವರ ದಂಡು: ವಿಧಾನಸೌಧ ಭಣಭಣ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 15:28 IST
Last Updated 9 ಆಗಸ್ಟ್ 2024, 15:28 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸಸೌಧದಲ್ಲಿ ಜನಪ್ರತಿಧಿಗಳು ಹಾಗೂ ಜನರಿಲ್ಲದೇ ಶುಕ್ರವಾರ ಭಣಗುಡುತ್ತಿದ್ದವು.

ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ-ಜೆಡಿಎಸ್‌ನ ಜನತಂತ್ರ ವಿರೋಧಿ ಧೋರಣೆ ವಿರೋಧಿಸಿ ಮೈಸೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಾಂದೋಲನ ಸಮಾವೇಶಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎಲ್ಲ ಸಚಿವರು ತೆರಳಿದ್ದರು. ಇತ್ತ ಆಡಳಿತ ಕೇಂದ್ರಗಳಲ್ಲಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹಾಜರಾತಿಯೂ ಶೇ 50ರಷ್ಟೂ ಇರಲಿಲ್ಲ. 

ADVERTISEMENT

ಜನಪ್ರತಿನಿಧಿಗಳ ಹಿಂಬಾಲಕರು, ಸಚಿವರು, ಶಾಸಕರ ಆಪ್ತ ಬಳಗ, ಅಧಿಕಾರಿಗಳು ಹಾಗೂ ಅವರನ್ನು ಕಾಣಲು ಬರುತ್ತಿದ್ದ ಜನರಿಂದ ಸದಾ ತುಂಬಿರುತ್ತಿದ್ದ ವಿಧಾನಸೌಧ, ವಿಕಾಸಸೌಧದಲ್ಲಿ ಶುಕ್ರವಾರ ಯಾವ ಸದ್ದುಗದ್ದಲವೂ ಇರಲಿಲ್ಲ.

ವಿವಿಧ ಸಚಿವರು, ಅಧಿಕಾರಿಗಳ ಕಚೇರಿಯಲ್ಲೂ ಅರ್ಧದಷ್ಟು ಸಿಬ್ಬಂದಿ ಕುರ್ಚಿಗಳು ಖಾಲಿ ಇದ್ದವು. ಬಹುತೇಕ ಅಧಿಕಾರಿಗಳು, ಸಿಬ್ಬಂದಿ ಹರಟುತ್ತಾ ಕುಳಿತಿದ್ದರು. ಪ್ರವೇಶ ದ್ವಾರಗಳಲ್ಲಿದ್ದ ಪೊಲೀಸರು ಆಗಾಗ ಬರುತ್ತಿದ್ದ ಒಬ್ಬಿಬ್ಬರನ್ನು ಪರಿಶೀಲಿಸುತ್ತಾ ಮತ್ತೆ ಕರ್ಚಿಯಲ್ಲಿ ಆಸೀನರಾಗುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.