ADVERTISEMENT

ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಚಿಂತನೆ: ಸಿದ್ಧರಾಮಯ್ಯ 

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 8:04 IST
Last Updated 2 ಡಿಸೆಂಬರ್ 2018, 8:04 IST
   

ಬಾಗಲಕೋಟೆ: ನಟ ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿಯೇ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ. ಇದುವರೆಗೂ ಆ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ತಾಲ್ಲೂಕಿನ ನೀಲಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.‌ ಈಗಾಗಲೇ ಮೈಸೂರು ಸಮೀಪ ಜಾಗ ಗುರುತಿಸಲಾಗಿತ್ತು. ಸದ್ಯ ಈ ವಿಚಾರನ್ಯಾಯಾಲಯದಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹೀಗಾಗಿ ಕುಮಾರಸ್ವಾಮಿ ಜೊತೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಚಳಿಗಾಲದ ಅಧಿವೇಶನದ ವೇಳೆ ಸದನದ ಒಳಗೂ ಹೊರಗೂ ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದರು.

ADVERTISEMENT

ಅವರು ಒಂದು ಲಕ್ಷ ಜನ ಸೇರಿಸಿದ್ರೆ ನಾವು ಎರಡು ಲಕ್ಷ ಜನ ಸೇರಿಸುತ್ತೇವೆ. ರೈತರು ಅವ್ರ ಪರವಾಗಿ ಅಷ್ಟೇ ಇದ್ದಾರೋಎಂದು ಪ್ರಶ್ನೆ ಮಾಡಿದರು.ನಮ್ಮ ಪರವಾಗಿಯೂ ರೈತರಿದ್ದಾರೆ, ರಾಜಕೀಯವಾಗಿ ಮಾತನಾಡುವ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದರು.

ರಾಮಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ‌ ಮಾತ್ರ ಬಿಜೆಪಿಗೆ ರಾಮ ನೆನಪಾಗ್ತಾನೆ.. ಕಳೆದ ನಾಲ್ಕುವರೇ ವರ್ಷದಿಂದ ಯಾಕೆ ನೆನಪಾಗಲಿಲ್ಲ? ಪ್ರಧಾನಿ‌ ಮೋದಿ ಇದನ್ಯಾಕೆ ಮಾಡಲಿಲ್ಲ...ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದರಾಮ‌ಮಂದಿರ ನಿರ್ಮಾಣ ವಿಚಾರ ಮುನ್ನೆಲೆಗೆ ಬಂದಿದೆ. ಇದೊಂದು ಚುನಾವಣಾ ನಾಟಕ ಎಂದರು.

ಬಿಜೆಪಿಯವರಿಗೆರಾಮ ಮಂದಿರ ಸಮಸ್ಯೆ ಬಗೆಹರಿಯಬಾರದು, ಇದು ಜೀವಂತವಾಗಿರಬೇಕು.! ಇದು ಪೊಲಿಟಿಕಲ್ ಹೈ ಡ್ರಾಮಾ ಎಂದು ಪುನರುಚ್ಚರಿಸಿದರು. ಸಂಪುಟ ಪುನಾರಚನೆ ವಿಳಂಬ ವಿಚಾರದಲ್ಲಿ ಯಾವುದೇ ಶಾಸಕರು ಅಸಮಾಧಾನಗೊಂಡಿಲ್ಲ ಎಂದು ಹೇಳಿದ ಅವರು, ಬಾಗಲಕೋಟೆ ನಾಯಕರಿಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದರು.

ನಾನು ಸುಳ್ಳು ಹೇಳಲ್ಲ...
ಬಾಗಲಕೋಟೆ ಯಲ್ಲಿ ನಾನು, ಆನಂದ್ ನ್ಯಾಮಗೌಡ ಮಾತ್ರ ಶಾಸಕರಿದ್ದೀವಿ‌. ಹಾಗಾಗಿ ಇಲ್ಲಿಗೆ ಸಚಿವ ಸ್ಥಾನ ಇಲ್ಲ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ ಹಾಗೂ ನಿಲ್ಲುವುದಿಲ್ಲಡಿಸೆಂಬರ್ 5ರಂದು ಶಾಸಕಾಂಗ ಸಭೆ ನಡೆಯುತ್ತೆ ಎಂದು ಪ್ರಶ್ನೆಯೊಂದಕ್ಕೆ ಅವರ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.