ಎಂ.ಕೆ.ಹುಬ್ಬಳ್ಳಿ: ವಿವಿಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡು ಗಂಟೆಯಿಂದ ಮತದಾನ ಸ್ಥಗೀತಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗದ್ದಿಕರವಿನಕೊಪ್ಪ ಗ್ರಾಮದ ಸರಕಾರಿ ಮಾದರಿ ಕನ್ನಡ ಶಾಲೆಯ ಎಡಭಾಗದ ಮತಗಟ್ಟೆ ಸಂಖ್ಯೆ-91ರಲ್ಲಿ ಈ ಘಟನೆ ನಡೆದಿದೆ.
ಕೇವಲ 7ಮತಗಳು ಚಲಾವಣೆಯಾಗುತ್ತಿದ್ದಂತೆ ಸ್ಥಗೀತಗೊಂಡಿರುವ ಮತಕೇಂದ್ರ. ವಿವಿಪ್ಯಾಟ್ ಸರಿಪಡಿಸಲು ಗಂಟೆಗಳಿಂದ ಕಸರತ್ತು ನಡೆಸುತ್ತಿರುವ ಚುನಾವಣಾ ಸಿಬ್ಬಂದಿ.
ಮತಗಟ್ಟೆ ಮುಂದು ಕಾದು ಕಾದು ಸುಸ್ತಾಗಿ ಮನೆಗಳತ್ತ ನಡೆದ ಮತದಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.