ADVERTISEMENT

ವ್ಯಾಸರಾಜತೀರ್ಥರ ವೃಂದಾವನ ಧ್ವಂಸ: ಪುನರ್‌ ನಿರ್ಮಾಣ ಆರಂಭ

ಮೂರು ಮಠದ ಯತಿಗಳು ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 20:00 IST
Last Updated 18 ಜುಲೈ 2019, 20:00 IST
ವೃಂದಾವನದ ಮರು ನಿರ್ಮಾಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲಾಯಿತು.
ವೃಂದಾವನದ ಮರು ನಿರ್ಮಾಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲಾಯಿತು.   

ಗಂಗಾವತಿ: ತಾಲ್ಲೂಕಿನ ಆನೆಗೊಂದಿಯಲ್ಲಿರುವ ವ್ಯಾಸರಾಜ ತೀರ್ಥರ ವೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ.

ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ವ್ಯಾಸರಾಜ ತೀರ್ಥರು ಸೇರಿದಂತೆ ಒಂಬತ್ತು ಯತಿಗಳ ವೃಂದಾವನಗಳಿವೆ. ವಿಜಯನಗರದ ರಾಜಗುರುಗಳಾಗಿದ್ದ ವ್ಯಾಸರಾಜರ ವೃಂದಾವನವನ್ನು ಅಲ್ಲಿನ ಅರಸರು ಕಲಾತ್ಮಕವಾಗಿ ನಿರ್ಮಿಸಿದ್ದರು.

ಕೃತ್ಯದ ಸುದ್ದಿ ತಿಳಿದ ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರು, ಮೈಸೂರು ವ್ಯಾಸರಾಜ (ಸೋಸಲೆ) ಮಠದ ವಿದ್ಯಾಶ್ರೀಶ ತೀರ್ಥರು, ಇದೇ ಮಠದ ಕಿರಿಯ ಶ್ರೀ ಹಾಗೂ ಮಾಧ್ವ ಪರಂಪರೆಯ ವಿವಿಧ ಯತಿಗಳು ಸ್ಥಳಕ್ಕೆ ಬಂದರು. ವೃಂದಾವನದ ಮರು ನಿರ್ಮಾಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲಾಯಿತು.

ADVERTISEMENT

‘ನಿಧಿಗಳ್ಳರೇ ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುತ್ತೇವೆ’ ಎಂದುಎಸ್ಪಿ ರೇಣುಕಾ ಕೆ.ಸುಕುಮಾರ್ ಹೇಳಿದರು.

ವ್ಯಾಸರಾಜತೀರ್ಥರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದರು. ನಾಡಿನ ವಿವಿಧೆಡೆ 252 ಪ್ರಾಣದೇವರ ಪ್ರತಿಷ್ಠಾಪನೆ ಮಾಡಿದ ಕೀರ್ತಿ ಅವರದು. ಮಾಧ್ವ ಸಂಪ್ರದಾಯದ ಯತಿಗಳು ಸನ್ಯಾಸ ಸ್ವೀಕರಿಸುವ ಮುನ್ನ ಇಲ್ಲಿಗೆ ಬಂದು ವ್ಯಾಸತೀರ್ಥರ ವೃಂದಾವನದ ದರ್ಶನ ಪಡೆಯುವ ಪರಂಪರೆ ಇದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.