ADVERTISEMENT

Wayanad Landslide | ಚಾಮರಾಜನಗರ: ಪತಿಯ ಅಂತ್ಯಕ್ರಿಯೆ, ಪತ್ನಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 0:30 IST
Last Updated 2 ಆಗಸ್ಟ್ 2024, 0:30 IST
<div class="paragraphs"><p>ವಯನಾಡ್ ಭೂಕುಸಿತ</p></div>

ವಯನಾಡ್ ಭೂಕುಸಿತ

   

ಪ್ರಜಾವಾಣಿ ಚಿತ್ರ/ಪುಷ್ಕರ್ ವಿ

ಚಾಮರಾಜನಗರ: ವಯನಾಡ್‌ನಲ್ಲಿ ಗುಡ್ಡಕುಸಿದು ಮೃತಪಟ್ಟಿದ್ದ ಚಾಮರಾಜನಗರ ತಾಲ್ಲೂಕಿನ ರಾಜೇಂದ್ರ ಅವರ ಅಂತ್ಯಕ್ರಿಯೆ ಕೇರಳದ ಮೆಪ್ಪಾಡಿಯ ಸ್ಮಶಾನದಲ್ಲೇ ಗುರುವಾರ ನಡೆಯಿತು. ಶವ ಛಿದ್ರಗೊಂಡಿದ್ದರಿಂದ ನೆರೆಹೊರೆಯವರು ಹಾಗೂ ಸಂಬಂಧಿಕರು ಸೇರಿ ಅಂತ್ಯಕ್ರಿಯೆ ಮುಗಿಸಿದರು.

ADVERTISEMENT

ರಾಜೇಂದ್ರ ಅವರ ಪತ್ನಿ ರತ್ನಮ್ಮ ಅವರಿಗಾಗಿ ಶೋಧ ಮುಂದುವರಿದಿದೆ. ಅವರ ತವರು ಚಾಮರಾಜನಗರ ತಾಲ್ಲೂಕಿನ ಇರಸವಾಡಿಯಲ್ಲಿ ಪೋಷಕರು ಹಾಗೂ ಸಂಬಂಧಿಕರು ಆತಂಕದಲ್ಲಿದ್ದಾರೆ.

‘ಮೇಪಾಡಿಯ ಸೇಂಟ್‌ ಜೋಸೆಫ್‌ ಪ್ರೌಢಶಾಲೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಗುಂಡ್ಲುಪೇಟೆ ತಾಲ್ಲೂಕಿನ ಮೂವರು ಹಾಗೂ ಚಾಮರಾಜನಗರ ತಾಲ್ಲೂಕಿನ ಏಳು ಮಂದಿಯನ್ನು ಜಿಲ್ಲೆಗೆ ಕರೆತರಲಾಗಿದೆ. ವೇತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತ್ರಯಂಬಕಪುರದ ಸ್ವಾಮಿಶೆಟ್ಟಿ ಅವರನ್ನು ಮನೆಗೆ ಸೇರಿಸಲಾಗಿದೆ’ ಎಂದು ಗುಂಡ್ಲುಪೇಟೆ ತಹಶೀಲ್ದಾರ್‌ ರಮೇಶ್‌ ಬಾಬು ತಿಳಿಸಿದ್ದಾರೆ. ಗುಡ್ಡಕುಸಿತದಲ್ಲಿ ಇದುವರೆಗೂ ಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಕತ್ತರಘಟ್ಟ ಮೂಲದ ಲೀಲಾವತಿ (55) ಮತ್ತು ಎರಡೂವರೆ ವರ್ಷದ ನಿಹಾಲ್‌ ಅವರ ಮೃತದೇಹಗಳನ್ನು ವಯನಾಡು ಜಿಲ್ಲಾಡಳಿತವು ಕರ್ನಾಟಕಕ್ಕೆ ಹಸ್ತಾಂತರಿಸಿದೆ’ ಎಂದು ತಹಶೀಲ್ದಾರ್ ನಿಸರ್ಗ ಪ್ರಿಯ ತಿಳಿಸಿದರು.

‘ಗುರುವಾರ ಸಂಜೆ 5 ಗಂಟೆ ವೇಳೆಗೆ ಪತ್ತೆ ಕಾರ್ಯ ಮುಗಿದು ದೃಢೀಕರಿಸಿದ ನಂತರ, ಅಧಿಕಾರಿಗಳಿಗೆ ಹಸ್ತಾಂತರಿಸಿರುವ ಕುರಿತು ಮಾಹಿತಿ ಬಂದಿದ್ದು, ಗುರುವಾರ ತಡರಾತ್ರಿ ಕತ್ತರಘಟ್ಟ ಗ್ರಾಮಕ್ಕೆ ತಲಪುವ ನಿರೀಕ್ಷೆ ಇದೆ’ ಎಂದರು.

ನಿಹಾಲ್‌ನ ಪೋಷಕರಾದ ಝಾನ್ಸಿರಾಣಿ–ಅನಿಲ್‌ಕುಮಾರ್‌ ದಂಪತಿ, ತಾತ ದೇವರಾಜು ಕೇರಳದ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.