ADVERTISEMENT

‘ತಪ್ಪಾಗಿದೆ ಒಪ್ಪಿಕೊಂಡಿದ್ದೇವೆ, ಪ್ರಕರಣ ಕೈ ಬಿಡಿ; ಇಲ್ಲವೇ ಸದನ ಸಮಿತಿ ರಚಿಸಿ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 7:40 IST
Last Updated 12 ಫೆಬ್ರುವರಿ 2019, 7:40 IST
   

ಬೆಂಗಳೂರು:ತಪ್ಪಾಗಿದೆ. ಅದನ್ನು ಒಪ್ಪಿಕೊಂಡಿದ್ದೇವೆ. ಅದರ ಬಗ್ಗೆ ಎಸ್‌ಐಟಿ ತನಿಖೆ ನಡೆಸುವುದರಿಂದ ಯಾವುದೇ ಉದ್ದೇಶ ಸಾಧನೆಯಾಗುವುದಿಲ್ಲ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿ‍ಪ್ರಾಯಪಟ್ಟರು.

ಸದನದಲ್ಲಿಮಂಗಳವಾರ ಆರಂಭವಾದ ಕಲಾಪದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಎಸ್‌ಐಟಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಯವರಿಗೆಈಗ ವಿಶ್ವಾಸ ಮೂಡಿರುವುದು ಹೇಗೆ? ಎಂದು ಪ್ರಶ್ನಿಸಿದರು.

ಒಂದು ವೇಳೆ ಎಸ್‌ಐಟಿ ತನಿಖೆ ಆರಂಭವಾಗುವುದಾದರೆ ಅವರಿಗೆ ಮಾಹಿತಿ ನೀಡುವುದಾದರೂ ಯಾರು? ಪೊಲೀಸರೊಂದಿಗೆ ಸ್ನೇಹವೂ ಒಳ್ಳೆಯದಲ್ಲ. ವೈರತ್ವವೂ ಒಳ್ಳೆಯದಲ್ಲ.ಸದನದ ವ್ಯವಹಾರವನ್ನು ಸದನದಲ್ಲೇ ಇತ್ಯರ್ಥಪಡಿಸಿಕೊಳ್ಳದೆ ಕೋರ್ಟ್‌ವರಗೆ ಮುಂದುವರಿಸುವುದು ಬೇಡ. ಪ್ರಕರಣವನ್ನು ದೊಡ್ಡದು ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು.

ADVERTISEMENT

ಮುಂದುವರಿದು, ಪ್ರಕರಣವನ್ನುವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂಬ ತಮ್ಮ ತೀರ್ಮಾನವನ್ನು ಮರುಪರಿಶೀಲನೆಗೊಳಪಡಿಸಬೇಕು ಎಂದು ಕೋರಿದರು.

ಮೊದಲ ಪ್ರಕರಣವಾಗಲಿದೆ: ಸುರೇಶ್‌ ಕುಮಾರ್‌

ಸದನಕ್ಕೆ ಸಂಬಂಧಿಸಿದ ಪ್ರಕರಣವನ್ನು ಎಸ್‌ಐಟಿ ತನಿಖೆ ವಹಿಸಿದರೆ ಇದು ದೇಶದಲ್ಲೇ ಮೊದಲ ಪ್ರಕರಣವಾಗಲಿದೆ. ಹಾಗಾಗಿ ಸಭಾಧ್ಯಕ್ಷರು ತಮ್ಮ ತೀರ್ಮಾನವನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಶಾಸಕ ಸುರೇಶ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.