ಬೆಂಗಳೂರು: ‘ಕರ್ನಾಟಕ ಭವನದಲ್ಲಿ ಐವರು ಐಎಎಸ್/ಐಎಫ್‌ಎಸ್ ಅಧಿಕಾರಿಗಳು ಇದ್ದಾರೆ. ಅಷ್ಟೊಂದು ಮಂದಿ ಅಲ್ಲೇನು ಕೆಲಸ ಮಾಡುತ್ತಿದ್ದಾರೆ. ಇದು ಅನಗತ್ಯ ವೆಚ್ಚಕ್ಕೆ ಸಾಕ್ಷಿ’ ಎಂದು ಸಿದ್ದರಾಮಯ್ಯ ಟೀಕಿಸಿದರು.
‘ನಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭವನದಲ್ಲಿ ಒಬ್ಬರೇ ಐಎಎಸ್ ಅಧಿಕಾರಿ ಇದ್ದರು. ಈಗ ಇರುವ ಐಎಎಸ್ ಅಧಿಕಾರಿಯೊಬ್ಬರನ್ನು ಯಾಕಪ್ಪ ಇಲ್ಲಿದ್ದೀಯಾ ಎಂದು ಪ್ರಶ್ನಿಸಿದೆ. ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕೆ ಇಲ್ಲಿದ್ದೇನೆ ಎಂಬ ಉತ್ತರ ನೀಡಿದರು’ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಕೆಲವು ಸಮಯದ ಹಿಂದೆ ಮುಖ್ಯ ಕಾರ್ಯದರ್ಶಿಗಳ ಜತೆಗೆ ಸಭೆ ನಡೆಸುತ್ತಿದ್ದೆ. ಒಂದೊಂದು ಇಲಾಖೆಗಳಲ್ಲಿ ಇಷ್ಟೊಂದು ಹಿರಿಯ ಅಧಿಕಾರಿಗಳು ಏಕೆ ಎಂದುಪ್ರಶ್ನಿಸಿದೆ. ಸರ್ಕಾರದಲ್ಲಿ ನಿಗಮ ಮಂಡಳಿ ಮಾಡುವ ರೀತಿಯಲ್ಲೇ ಇಲಾಖೆಗಳಲ್ಲೂ ಹಿರಿಯ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಪ್ರಾಸಂಗಿಕವಾಗಿ ಹೇಳಿದರು’ ಎಂದು ನೆನಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.