ಬೆಂಗಳೂರು: ‘ಆಹಾರದ ವೈವಿಧ್ಯ ಅರಿಯದೇ ಬಡವರ ಆಹಾರದ ವಿರುದ್ಧ ದಾಳಿ ಮಾಡುವುದೇಕೆ’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಅವರು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಹದೇವಪ್ಪ, ‘ವೇದ ಪಂಡಿತರಾದ ಸ್ವಾಮಿಗಳೇ, ವೇದಗಳಲ್ಲಿ ಗೋಮಾಂಸ ಸೇವನೆಯನ್ನು ಶ್ರೇಷ್ಠ ಎಂದಿದ್ದಾರೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ.
‘ಶಾಲೆಗಳಲ್ಲಿ ಮೊಟ್ಟೆ ತಿನ್ನುವರಿಗೆ ಅವನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಹಣ್ಣನ್ನೂ ಪ್ರತ್ಯೇಕವಾಗಿ ನೀಡಲಾಗುತ್ತದೆ. ಬಹುಶಃ ಈ ಸಂಗತಿ ಅರಿಯದ ಸ್ವಾಮೀಜಿಯವರು, ಯಾವುದಾದರೂ ಸರ್ಕಾರಿ ಶಾಲೆಗೆ ಸೇರಿ ಅಲ್ಲಿನ ಆಹಾರ ವಿತರಣೆ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲಿ’ ಎಂದು ಸಲಹೆ ನೀಡಿದ್ದಾರೆ. ‘ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಸರ್ಕಾರವು ಮೊಟ್ಟೆ ಕೊಡುವ ಬದಲು ನೇರವಾಗಿ ಹಣ ನೀಡಿದರೆ ಯಾರಿಗೆ ಏನು ಬೇಕೋ ಅದನ್ನು ಖರೀದಿಸಿ ತಿನ್ನುತ್ತಾರೆ’ ಎಂದು ಶ್ರೀಗಳು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.