ADVERTISEMENT

‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:35 IST
Last Updated 8 ಫೆಬ್ರುವರಿ 2019, 19:35 IST
ಲೋಗೋ
ಲೋಗೋ   

ಬೆಂಗಳೂರು: ಬಜೆಟ್‌ನಲ್ಲಿ ಮಹಿಳೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ನೀಡಿರುವ ಅನುದಾನದ ವಿವರ.

* ‘ಮಾತೃಶ್ರೀ’ ಯೋಜನೆಯ ತಿಂಗಳ ಸಹಾಯಧನ ₹2 ಸಾವಿರಕ್ಕೆ ಹೆಚ್ಚಳ. (ನ.1ರಿಂದ ಜಾರಿ)

* ಅಂಗನವಾಡಿ ಕಾರ್ಯಕರ್ತೆಯರಿಗೆ ₹500, ಸಹಾಯಕಿಯರಿಗೆ ₹250 ಗೌರವಧನ ಹೆಚ್ಚಳ. (ನ.1ರಿಂದ ಜಾರಿ)

ADVERTISEMENT

* ನಗರ ಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಕೇಂದ್ರಗಳ ಸ್ಥಾಪನೆ.

* ₹10 ಕೋಟಿ ವೆಚ್ಚದಲ್ಲಿ 1,000 ಅಂಗನವಾಡಿ ಕಟ್ಟಡಗಳ ದುರಸ್ತಿ.

* 10 ಜಿಲ್ಲೆಗಳ ಮಕ್ಕಳ ವಿಶೇಷ ಕೋರ್ಟ್‌ಗಳನ್ನು ಮಕ್ಕಳ–ಸ್ನೇಹಿ ಕೋರ್ಟ್‌ಗಳನ್ನಾಗಿ ಪರಿವರ್ತಿಸಲು ₹ 3 ಕೋಟಿ.

* ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕೆ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭ.

* ₹15 ಕೋಟಿ ವೆಚ್ಚದಲ್ಲಿ 2 ಸಾವಿರ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳ (ರೆಟ್ರೋಫಿಟೆಡ್) ವಿತರಣೆ.

* 1 ಸಾವಿರ ದಮನಿತ ಮಹಿಳೆಯರಿಗೆ ಉದ್ಯಮಶೀಲತೆ, ಕೌಶಲ್ಯ ತರಬೇತಿ ಹಾಗೂ ಉತ್ಪಾದನಾ ಘಟಕ ಸ್ಥಾಪಿಸಲು ₹11.5 ಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.