ADVERTISEMENT

ವಿಶೇಷ ಯೋಜನೆಯಡಿ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 13:51 IST
Last Updated 7 ಅಕ್ಟೋಬರ್ 2024, 13:51 IST
ವಿ. ಸೋಮಣ್ಣ 
ವಿ. ಸೋಮಣ್ಣ    

ನವದೆಹಲಿ: ಕರ್ನಾಟಕಕ್ಕೆ ಮತ್ತೆ ಎಂಟು ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ಮಂಜೂರು ಮಾಡಲಾಗಿದ್ದು, ಈ ಯೋಜನೆಗಳ ಕಾಮಗಾರಿಗಳನ್ನು ರೈಲ್ವೆ ವಿಶೇಷ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 

‘ಕಾಮಗಾರಿಗಳ ಸಂಪೂರ್ಣ ವೆಚ್ಚವನ್ನು ರೈಲ್ವೆ ಸಚಿವಾಲಯವೇ ಭರಿಸಲಿದೆ. ವಿಶೇಷ ಯೋಜನೆಗಳೆಂದು ಪರಿಗಣಿಸಿರುವುದರಿಂದ ಭೂಸ್ವಾಧೀನವೂ ತ್ವರಿತಗತಿಯಲ್ಲಿ ಆಗಲಿದೆ' ಎಂದು ಅವರು ತಿಳಿಸಿದ್ದಾರೆ. 

ರೈಲ್ವೆ ಮೇಲ್ಸೇತುವೆಗಳು: ಶ್ರೀರಂಗಪಟ್ಟಣ–ಪಾಂಡವಪುರ ನಡುವೆ, ನಂಜನಗೂಡು, ನಿಡವಂದ–ಹಿರೇಹಳ್ಳಿ ನಡುವೆ, ಕ್ಯಾತಸಂದ್ರ–ತುಮಕೂರು, ತುಮಕೂರು, ಅಜ್ಜಂಪುರ. 

ADVERTISEMENT

ರೈಲ್ವೆ ಕೆಳಸೇತುವೆಗಳು: ಶಿವಮೊಗ್ಗ, ಆನಂದಪುರ–ಸಾಗರ ನಡುವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.