ಬೆಂಗಳೂರು:‘ಬಿಜೆಪಿ ಶಾಸಕರ ಬಂಡಾಯ, ಅಸಮಾಧಾನ ಅವರವರ ಭಾವಕ್ಕೆ ಬಕುತಿಗೆ ಬಿಟ್ಟಿದ್ದು. ಚುನಾವಣೆ ಪೂರ್ವದಲ್ಲೇ ನಾವು ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿಕೊಂಡು ಆಗಿದೆ’ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
‘ಈಗ ಏನಿದ್ದರೂ ಕೊರೊನಾ ವಿರುದ್ದ ಹೋರಾಟ ಅಷ್ಟೇ ನಮ್ಮ ಗುರಿ. ಉಳಿದ ಯಾವುದೇ ವಿಷಯಗಳಲ್ಲಿ ವಿವಾದ ಸೃಷ್ಟಿಸಲು ನಾನು ಇಚ್ಚಿಸುವುದಿಲ್ಲ. ನಾನು ಯಾವತ್ತಿದ್ದರೂ ಚಡ್ಡಿ ಗ್ಯಾಂಗ್ ಲೀಡರ್ ಎಂದು ಒಪ್ಪಿಕೊಂಡಿದ್ದೇನೆ. ಪಕ್ಷದ ವಿಷಯಕ್ಕೆ ಬರುವುದಾದರೆ ಮಾತ್ರ ನಾನು ಏನು ಬೇಕಾದರೂ ಆಡಲು, ಮಾಡಲು ರೆಡಿ. ಆದರೆ ವೈಯಕ್ತಿಕ ವಿಷಯಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ’ಎಂದು ಶುಕ್ರವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ವಿ. ಯಡಿಯೂರಪ್ಪ ಸರ್ವಾನುಮತದ ನಾಯಕ ಅಂತ ಹೈಕಮಾಂಡ್ ಹೇಳಿದೆ.
ಇದರಲ್ಲಿ ಯಾರಿಗೂ ಅನುಮಾನ ಬೇಡ.ಯತ್ನಾಳ್ ನಾಯಕತ್ವದ ವಿರುದ್ಧ ಮಾತಾಡಿಲ್ಲ. ಸದ್ಯದ ನಮ್ಮ ಗುರಿ ಕೊರೋನಾ ಮಣಿಸೋದು’ಎಂದರು.
‘ಮಾದ್ಯಮಗಳಲ್ಲಿ ನಿತ್ಯ ಕೊರೋನಾ ಸುದ್ದಿಗಳೇ ಬರ್ತಿದ್ವು. ಮಾದ್ಯಮಗಳಿಗೂ ಒಂದು ಚೇಂಜ್ ಚೇನ್ ಬೇಕಿತ್ತು.ಅದಕ್ಕಾಗಿ ನಮ್ಮವರು ಸಭೆ ಮಾಡಿದ್ದಾರೆ ಅನ್ಸತ್ತೆ.ಮಾದ್ಯಮಗಳ ಬಾಯಿ ರುಚಿ ಬದಲಾಯಿಸಲು ಈ ಸಭೆ ನಡೆದಿರಬೇಕು’ಎಂದು ಚಟಾಕಿ ಹಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.