ADVERTISEMENT

ಕಲ್ಲಿದ್ದಲಿನ ಹೊಗೆ ಸೇವಿಸಿ ಯುವತಿ ಸಾವು ಮೂವರು ಅಸ್ವಸ್ಥ

ರಾತ್ರಿ ಚಳಿ ತಾಳಲಾರದೆ ಕಲ್ಲಿದ್ದಲಿನ ಹೊಗೆ ಹಾಕಿದ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 21:44 IST
Last Updated 27 ನವೆಂಬರ್ 2020, 21:44 IST
   
ಗೌರಿಬಿದನೂರು: ಚಳಿ ತಾಳಲಾರದೆ ಶಾಖ ಪಡೆಯಲು ಹಾಕಿದ್ದ ಕಲ್ಲಿದ್ದಲಿನ ಹೊಗೆ ಸೇವಿಸಿ ಯುವತಿಯೊಬ್ಬಳು ಮೃತಪಟ್ಟಿದ್ದು, ಕುಟುಂಬದ ಮೂವರು ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ಅಲೀಪುರದ ಬಳಿಯ ಮರಾಠಿ ಪಾಳ್ಯದಲ್ಲಿ ಶುಕ್ರವಾರ ನಡೆದಿದೆ.

ಅರ್ಚನಾ (16) ಮೃತಪಟ್ಟಿದ್ದು, ಆಕೆಯ ತಂದೆ ರಾಮಾಂಜಿನೇಯಲು, ತಾಯಿ ಶಾಂತಮ್ಮ ಮತ್ತು ಸಹೋದರಿ ಅಂಕಿತಾ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲೀಪುರದ ಮೀರ್‌ ಅಲಿ ಅಬ್ಬಾಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಈ ಕುಟುಂಬ ಕೆಲಸ ಮಾಡುತ್ತಿತ್ತು. ಗುರುವಾರ ರಾತ್ರಿ ಚಳಿ ತಾಳಲಾರದೆ ಮನೆಯಲ್ಲಿ ಇಟ್ಟಿಗೆ ಸುಡಲು ತಂದಿದ್ದ ಕಲ್ಲಿದ್ದಲಿನಿಂದ ಹೊಗೆ ಹಾಕಿದ್ದರು. ಈ ವಿಷಯುಕ್ತ ಹೊಗೆ ಸೇವಿಸಿದ್ದ ಕುಟುಂಬದ ಸದಸ್ಯರು ಪ್ರಜ್ಞಾಹೀನರಾಗಿದ್ದರು ಎನ್ನಲಾಗಿದೆ.

ADVERTISEMENT

ಬೆಳಿಗ್ಗೆ ಮನೆಯಿಂದ ಯಾರೊಬ್ಬರು ಹೊರಗೆ ಬಾರದಿದ್ದಾಗ ಅಕ್ಕಪಕ್ಕದ ಮನೆಯವರು ಪರಿಶೀಲಿಸಿದ್ದಾರೆ. ಅನುಮಾನಗೊಂಡು ಮಂಚೇನಹಳ್ಳಿಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬಾಗಿಲು ಮುರಿದು ಪರಿಶೀಲಿಸಿದರು.

ಅರ್ಚನಾ (16) ಮೃತಪಟ್ಟಿದ್ದು, ಆಕೆಯ ತಂದೆ ರಾಮಾಂಜಿನೇಯಲು, ತಾಯಿ ಶಾಂತಮ್ಮ ಮತ್ತು ಸಹೋದರಿ ಅಂಕಿತಾ ತೀವ್ರವಾಗಿ ಅಸ್ವಸ್ಥಗೊಂಡಿದ್ದು,ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲೀಪುರದ ಮೀರ್‌ ಅಲಿ ಅಬ್ಬಾಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಈ ಕುಟುಂಬ ಕೆಲಸ ಮಾಡುತ್ತಿತ್ತು. ಗುರುವಾರ ರಾತ್ರಿ ಚಳಿ ತಾಳಲಾರದೆ ಮನೆಯಲ್ಲಿ ಇಟ್ಟಿಗೆ ಸುಡಲು ತಂದಿದ್ದ ಕಲ್ಲಿದ್ದಲಿನಿಂದ ಹೊಗೆ ಹಾಕಿದ್ದರು. ಈ ವಿಷಯುಕ್ತ ಹೊಗೆ ಸೇವಿಸಿದ್ದ ಕುಟುಂಬದ ಸದಸ್ಯರು ಪ್ರಜ್ಞಾಹೀನರಾಗಿದ್ದರು ಎನ್ನಲಾಗಿದೆ.

ಬೆಳಿಗ್ಗೆ ಮನೆಯಿಂದ ಯಾರೊಬ್ಬರು ಹೊರಗೆ ಬಾರದಿದ್ದಾಗ ಅಕ್ಕಪಕ್ಕದ ಮನೆಯವರು ಪರಿಶೀಲಿಸಿದ್ದಾರೆ. ಅನುಮಾನಗೊಂಡು ಮಂಚೇನಹಳ್ಳಿಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬಾಗಿಲು ಮುರಿದು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.