ADVERTISEMENT

ಸಿಕಿಂದ್ರಾಬಾದ್‌ ವಾಡಿಯಲ್ಲಿ ಮಾರಾಮಾರಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 16:41 IST
Last Updated 1 ಜನವರಿ 2020, 16:41 IST

ಭಾಲ್ಕಿ (ಬೀದರ್‌ ಜಿಲ್ಲೆ): ತಾಲ್ಲೂಕಿನ ಸಿಕಿಂದ್ರಾಬಾದ್ ವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷಾಚರಣೆ ವೇಳೆದಲಿತ ಹಾಗೂ ರಡ್ಡಿ ಸಮುದಾಯದ ಗುಂಪಿನ ನಡುವೆ ಮಾರಾಮಾರಿ ನಡೆದಿದೆ.

ಗಲಾಟೆಯಲ್ಲಿ ಗಾಯಗೊಂಡಿದ್ದ ರಡ್ಡಿ ಸಮುದಾಯದ ಯುವಕಝರೇಪ್ಪಾ ಭೀಮಣ್ಣ (30) ಬುಧವಾರ ಹೈದರಾಬಾದ್‌ ಆಸ್ಪತ್ರೆಗೆ ಸಾಗಿಸುವಾಗಮೃತಪಟ್ಟಿದ್ದಾರೆ.

ಹೊಸ ವರ್ಷದ ಅಂಗವಾಗಿ, ದಲಿತ ಸಮುದಾಯದ ಯುವಕರು ಗ್ರಾಮದಲ್ಲಿ ಡಿ.ಜೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಆಗ ಹೊಲದಿಂದ ಮನೆಗೆ ಹೋಗುತ್ತಿದ್ದ, ರಡ್ಡಿ ಸಮುದಾಯದವರು ದಾರಿ ಬಿಡುವಂತೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಸಮುದಾಯದ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ತಾಲ್ಲೂಕಿನ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಎರಡೂ ಸಮುದಾಯದವರು ದೂರು–ಪ್ರತಿ ದೂರುದಾಖಲಿಸಿದ್ದು, ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.

‘ಘರ್ಷಣೆಯಲ್ಲಿಗಾಯಗೊಂಡ ಅವಿನಾಶ ಬಾಬುರಾವ್, ನಾಗಪ್ಪ, ಬಸವರಾಜ, ಬಾಬುರಾವ್ ಅವರಿಗೆ ಖಟಕ ಚಿಂಚೋಳಿ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಗುಣಮುಖರಾದ ನಂತರ ಅವರನ್ನು ಬಂಧಿಸಲಾಗುವುದು’ ಎಂದು ಡಿವೈಎಸ್ಪಿ ವೆಂಕನಗೌಡ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.