ಗೋಕಾಕ: ರಾಜ್ಯದಲ್ಲಿ ಬಿಜೆಪಿ 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮತ್ತೆ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ನ್ಯೂ ಇಂಗ್ಲಿಷ್ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 136ರಲ್ಲಿ ತಮ್ಮ ಪುತ್ರ ಅಮರನಾಥ ಅವರೊಂದಿಗೆ ಬೈಕ್ ಮೇಲೆ ಬಂದು , ಸರತಿಯಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂದರು.
ಡಿಕೆಶಿಯಿಂದ ಬ್ಲ್ಯಾಕ್ ಮೇಲ್: ‘ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಮಹಾನಾಯಕ ಡಿಕೆಶಿ ಮಂಗಳವಾರ ರಾತ್ರಿವರೆಗೂ ನನಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ’ ಎಂದು ಆರೋಪಿಸಿದರು.
‘ರಾಜ್ಯದ ಮುಂದಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಿ.ಡಿ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸಿಬಿಐ ತನಿಖೆ ನಡೆದರೆ ನಾನೋಬ್ಬನೇ ಅಲ್ಲ ನೂರಾರು ಜನರು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಅಂಥ ಆಧಾರ ರಹಿತ ಒತ್ತಡಗಳಿಗೆ ಮಣಿಯದೇ ನಾನೊಬ್ಬ ಗಟ್ಟಿಯಾಗಿ ನಿಂತಿದ್ದೇನೆ. ಡಿಕೆಶಿ ಒಬ್ಬ ದೊಡ್ಡ ರಾಜಕಾರಣಿ, ಮುಖ್ಯಮಂತ್ರಿ ಆಕಾಂಕ್ಷಿ. ಇಂತಹ ಸಣ್ಣ ಮಟ್ಟದ ರಾಜಕೀಯ ಮಾಡಬಾರದು. ಅವನ ನನ್ನ ಸಂಬಂಧ ಸರಿಯಿದ್ದಾಗ ಡಿಕೆಶಿ ಒಳ್ಳೆಯ ವ್ಯಕ್ತಿ ಇದ್ದ. ಆದರೆ ವಿಷಕನ್ಯೆ ಹಿಂದೆ ಬಿದ್ದು ಹೀಗೆ ಮಾಡುತ್ತಿದ್ದಾನೆ. ಮುಂದೆ ಮಂತ್ರಿ ಮಂಡಲ ರಚನೆ ಸಂದರ್ಭದಲ್ಲೂ ಅವನು ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ವಿಷಕನ್ಯೆಯನ್ನು ಬಿಟ್ಟು ಹಿಂದೆ ಸರಿಯಲ್ಲ ಎಂದರೆ ಆತನಿಗೆ ರಾಜಕೀಯ ಭವಿಷ್ಯವಿಲ್ಲ. ವಿಷಕನ್ಯೆಯಿಂದ ಅವನು ಹೋರಬರಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.