ADVERTISEMENT

ಅಮೆರಿಕ ಜತೆ ಸಂಬಂಧಕ್ಕೆ ಕ್ಯೂಬಾ ಅಸೆಂಬ್ಲಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಹವಾನಾ (ಐಎಎನ್‌ಎಸ್‌/ಇಎಫ್‌ಇ):  ಬದ್ಧವೈರಿಗಳಾಗಿದ್ದ ಕ್ಯೂಬಾ ಮತ್ತು ಅಮೆರಿಕ ರಾಜತಾಂತ್ರಿಕ ಸಂಬಂಧಗಳನ್ನು ಪುನರ್ ಸ್ಥಾಪಿಸಿ­ಕೊಳ್ಳಲು ದೃಢ ಹೆಜ್ಜೆ ಇರಿಸಿವೆ. ಅಮೆರಿಕದೊಂದಿಗಿನ ಸಂಬಂಧ ಸುಧಾರಿಸಲು ಕ್ಯೂಬಾ ಅಧ್ಯಕ್ಷ ರೌಲ್‌ ಕ್ಯಾಸ್ಟ್ರೊ ಅವರ ತೀರ್ಮಾನಕ್ಕೆ ರಾಷ್ಟ್ರೀಯ ಅಸೆಂಬ್ಲಿ ಒಪ್ಪಿಗೆ ನೀಡಿದೆ. ಇದರೊಂದಿಗೆ 50 ವರ್ಷಗಳ ನಂತರ ಉಭಯ ದೇಶಗಳು ಸೌಹಾರ್ದ ಸಂಬಂಧ ಹೊಂದಲಿವೆ.

ಐವತ್ತು ವರ್ಷಗಳ ನಂತರ ರಾಜತಾಂತ್ರಿಕ ಸಂಬಂಧಗಳನ್ನು ಹೊಂದುವ ಬಗ್ಗೆ ಎರಡೂ ದೇಶಗಳು ಈಗಾಗಲೇ ಅಧಿಕೃತ ಘೋಷಣೆಯನ್ನೂ ಮಾಡಿವೆ.

ಅಮೆರಿಕ ಜತೆ ಯಾವುದೇ ಮಾತುಕತೆ ಆರಂಭಿಸಲು ಅಭ್ಯಂತರವಿಲ್ಲ ಎಂದಿರುವ ಅಧ್ಯಕ್ಷ ರೌಲ್‌ ಕ್ಯಾಸ್ಟ್ರೊ, ಕ್ಯೂಬಾದಲ್ಲಿ ಯಾವುದೇ ರೀತಿಯ ರಾಜಕೀಯ ಬದಲಾವಣೆಯನ್ನು ಅಮೆರಿಕ ಬಯಸಬಾರದು. ತಮ್ಮದು ‘ಸಾರ್ವ­ಭೌಮ ದೇಶ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.