ADVERTISEMENT

ಅರಣ್ಯ ನಾಶ ಭಾರತದಲ್ಲೇ ಹೆಚ್ಚು; ವಿಶ್ವಸಂಸ್ಥೆ ವರದಿ

25 ವರ್ಷಗಳಲ್ಲಿ ಶೇ 3ರಷ್ಟು ತಗ್ಗಿದ ಜಾಗತಿಕ ಅರಣ್ಯ ಪ್ರದೇಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2015, 10:48 IST
Last Updated 15 ಸೆಪ್ಟೆಂಬರ್ 2015, 10:48 IST

ಸಿಡ್ನಿ (ಐಎಎನ್‌ಎಸ್‌): ಭಾರತದಲ್ಲಿ ಹಚ್ಚ ಹಸಿರಿನ ಅರಣ್ಯ ಪ್ರದೇಶ ಕಳೆದ ಎರಡೂವರೆ ದಶಕದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಅರಣ್ಯನಾಶ ಭಾರತದಲ್ಲೇ  ಹೆಚ್ಚಿದೆ  ಎಂದು  ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ ‘ಜಾಗತಿಕ ಅರಣ್ಯ ಸಂಪತ್ತು ಮೌಲ್ಯಮಾಪನ ವರದಿ (ಜಿಎಫ್‌ಆರ್‌ಎ) ಹೇಳಿದೆ.

ಮೆಲ್ಬರ್ನ್‌ ವಿಶ್ವವಿದ್ಯಾಲಯದ ತಜ್ಞರ ತಂಡ ಈ ಅಧ್ಯಯನ ನಡೆಸಿದೆ.

1990ರಿಂದ ಅಂದರೆ ಕಳೆದ 25 ವರ್ಷಗಳಲ್ಲಿ  ಪ್ರಪಂಚದಾದ್ಯಂತ ಅರಣ್ಯ ಪ್ರದೇಶ ಶೇ 3ರಷ್ಟು ತಗ್ಗಿದೆ. ಶೇ 3ರಷ್ಟು ಅಂದರೆ 129 ದಶಲಕ್ಷ ಹೇಕ್ಟರ್‌ಗಳಷ್ಟು. ಇದು ಗಾತ್ರದಲ್ಲಿ ದಕ್ಷಿಣ ಆಫ್ರಿಕಾ ದೇಶವನ್ನು ಹೋಲುತ್ತದೆ ಎಂದು ಈ ಅಧ್ಯಯನ ತಂಡದ ಮುಖ್ಯಸ್ಥ ಪ್ರೊಪೆಸರ್‌ ರುದ್‌ ಕೀನನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅರಣ್ಯ ರಕ್ಷಣೆಗಾಗಿ ಹಲವು ಕಾಯ್ದೆಗಳು ಜಾರಿಯಲ್ಲಿವೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಾಮರ್ಥ್ಯ ಆ ದೇಶಗಳಿಗಿಲ್ಲ. ಹೀಗಾಗಿ ಕೃಷಿ ಭೂಮಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಆಹುತಿಯಾಗುತ್ತಿವೆ ಎಂದೂ ವರದಿ ಗಮನ ಸೆಳೆದಿದೆ.

ಸಣ್ಣ ಮತ್ತು ದೊಡ್ಡ ರೈತರಿಂದ ಕೃಷಿ ಭೂಮಿ ಅಭಿವೃದ್ಧಿಗಾಗಿ ಹೆಚ್ಚಿನ ಅರಣ್ಯ ನಾಶ ಆಗಿದೆ. ಬ್ರೆಜಿಲ್‌, ಇಂಡೋನೇಷ್ಯಾ, ನೈಜೀರಿಯಾದಲ್ಲಿ ಕಳೆದ 5 ವರ್ಷಗಳಲ್ಲಿ ಗರಿಷ್ಠ ಹಾನಿ ಸಂಭವಿಸಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT