ಲಾಸ್ ಏಂಜಲಿಸ್ : 89ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ರಾತ್ರಿ ನಡೆದಿದ್ದು, ಬ್ಯಾರಿ ಜೆಂಕಿನ್ಸ್ ಅವರ ‘ಮೂನ್ ಲೈಟ್’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ. ಆದರೆ ಅತ್ಯುತ್ತಮ ಚಿತ್ರ ಘೋಷಣೆ ಸಂದರ್ಭದಲ್ಲಿ ಮೊದಲು ‘ಲಾ ಲಾ ಲ್ಯಾಂಡ್’ ಹೆಸರನ್ನು ತಪ್ಪಾಗಿ ಹೇಳಿದ್ದರಿಂದ ಗೊಂದಲ ಸೃಷ್ಟಿಯಾಯಿತು.
ಕಾರ್ಯಕ್ರಮದ ನಿರೂಪಕ ವಾರನ್ ಬೆಟಿ ಹಾಗೂ ಲಾಲಾ ಲ್ಯಾಂಡ್ ಚಿತ್ರದ ಹೆಸರನ್ನು ತಪ್ಪಾಗಿ ಘೋಷಿಸಿದ್ದರು. ತಪ್ಪಿನ ಅರಿವಾಗುವಷ್ಟರಲ್ಲಿ ಆ ಚಿತ್ರದ ನಿರ್ಮಾಪಕರು ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಿ, ತಮ್ಮ ಭಾಷಣವನ್ನೂ ಪೂರ್ಣಗೊಳಿಸುವ ಹಂತದಲ್ಲಿದ್ದರು.
ಆಗ ನಿರೂಪಕ ಬೆಟಿ ಅವರು ಭಾಷಣವನ್ನು ತಡೆದು ಆಗಿರುವ ತಪ್ಪನ್ನು ಸರಿಪಡಿಸಿದರು. ‘ಮೂನ್‌ಲೈಟ್’ ಹೆಸರು ಘೋಷಣೆಯಾಗುತ್ತಿದ್ದಂತೆ ಲಾ ಲಾ ಲ್ಯಾಂಡ್ ಚಿತ್ರದ ನಿರ್ಮಾಪಕ ಜೊರ್ಡಾನ್ ಹೊರೊವಿಟ್ಜ್ ಅವರೇ ಪ್ರಶಸ್ತಿ ಸ್ವೀಕರಿಸಲು ಆ ಚಿತ್ರತಂಡವನ್ನು ವೇದಿಕೆಗೆ ಸ್ವಾಗತಿಸಿದರು.
89ನೇ ಅಕಾಡೆಮಿ ಪ್ರಶಸ್ತಿ ಪಟ್ಟಿಯನ್ನು ವಿಡಿಯೋ ಮೂಲಕ ಪ್ರಸ್ತುತ ಪಡಿಸುವ ಪ್ರಯತ್ನ ಇಲ್ಲಿದೆ.
[Related]
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.