ಸ್ಟಾಕ್ ಹೋಂ (ಎಪಿ): 2015ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಆ್ಯಂಗಸ್ ಡೇಟನ್ ಅವರಿಗೆ ಸಂದಿದೆ.
‘ಅನುಭೋಗತೆ, ಬಡತನ ಹಾಗೂ ಶ್ರೇಯೋಭಿವೃದ್ಧಿಯ ವಿಶ್ಲೇಷಣೆಗಾಗಿ’ ಈ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವಾದ ಸ್ವೀಡನ್‌ನ ರಾಯಲ್ ಅಕಾಡೆಮಿ ಸೋಮವಾರ ಹೇಳಿದೆ.
ಈ ಪ್ರಶಸ್ತಿ ಪ್ರಕಟಣೆಯೊಂದಿಗೆ 2015ನೇ ಸಾಲಿನ ಎಲ್ಲಾ ನೊಬೆಲ್ ಪ್ರಶಸ್ತಿಗಳೂ ಘೋಷಣೆಯಾಗಿವೆ. ಡಿಸೆಂಬರ್ 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
1945ರಲ್ಲಿ ಎಡಿನ್‌ಬರ್ಗ್‌ನಲ್ಲಿ ಜನಿಸಿರುವ ಡೇಟನ್, ಸದ್ಯ ಅಮೆರಿಕದ ಪ್ರೀನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಇದೇ ವಿಭಾಗದ ಪ್ರಶಸ್ತಿಗೆ ಫ್ರೆಂಚ್ ಅರ್ಥಶಾಸ್ತ್ರಜ್ಞ ಜೀಣ್ ಟಿರೊಲ್ ಅವರು ಭಾಜನರಾಗಿದ್ದರು.
ಇದು ನೊಬೆಲ್ ಪ್ರಾರಂಭಿಸಿದ್ದಲ್ಲ!: 1895ರಲ್ಲಿ ಆಲ್ಫೈಡ್ ನೊಬೆಲ್ ಸ್ಥಾಪಿಸಿದ ಪ್ರಶಸ್ತಿಗಳಲ್ಲಿ ಈ ವಿಭಾಗಕ್ಕೆ ಪ್ರಶಸ್ತಿ ಇರಲಿಲ್ಲ. 1968ರಲ್ಲಿ ಸ್ವಿಡನ್ ಸೆಂಟ್ರಲ್ ಬ್ಯಾಂಕ್ ಅರ್ಥಶಾಸ್ತ್ರ ವಿಭಾಗದಲ್ಲೂ ಪ್ರಶಸ್ತಿ ನೀಡುವ ಪರಿಪಾಠಕ್ಕೆ ನಾಂದಿ ಹಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.