ADVERTISEMENT

ಇರಾಕ್: ಕಾರ್ ಬಾಂಬ್ ಸ್ಫೋಟಕ್ಕೆ 115 ಬಲಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2015, 12:10 IST
Last Updated 18 ಜುಲೈ 2015, 12:10 IST

ಇರಾಕ್(ಎಎಫ್ ಪಿ): ಉತ್ತರ ಬಾಗ್ದಾದ್ ನಲ್ಲಿ ನಡೆದ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ 15 ಮಕ್ಕಳು ಸೇರಿದಂತೆ 115 ಮಂದಿ ಮೃತಪಟ್ಟು, 17 ಜನ ಕಾಣೆಯಾಗಿದ್ದಾರೆ. 170 ಜನ ಗಾಯಗೊಂಡಿದ್ದಾರೆ.

ಬಾಗ್ದಾದ್ ನಿಂದ 20 ಕಿ.ಮೀ. ದೂರದಲ್ಲಿರುವ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಜನರು ರಂಜಾನ್ ಖರೀದಿಗೆ ಜಮಾಯಿಸಿದ್ದಾಗ ಆತ್ಮಾಹುತಿ ದಾಳಿ ನಡೆದಿದೆ. ಘಟನೆಯಲ್ಲಿ 15 ಮಕ್ಕಳು ಸೇರಿದಂತೆ ಹಲವು ಪುರುಷರು, ಮಹಿಳೆಯರು ಸಾವಿಗೀಡಾಗಿದ್ದು, ಶನಿವಾರ ಮೃತರ ಸಂಖ್ಯೆ 115ಕ್ಕೇರಿದೆ.

ಘಟನೆಯಲ್ಲಿ 17 ಮಂದಿ ಕಾಣೆಯಾಗಿದ್ದು, 170 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT