ನವದೆಹಲಿ (ಪಿಟಿಐ): ಇಬ್ಬರು ಕನ್ನಡಿಗರು ಸೇರಿದಂತೆ ನಾಲ್ಕು ಮಂದಿ ಭಾರತೀಯರನ್ನು ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಉಗ್ರರು ಲಿಬಿಯಾದಿಂದ ಅಪಹರಿಸಿದ್ದಾರೆ.
ಅಪಹರಣಗೊಂಡವರಲ್ಲಿ ಒಬ್ಬರು ರಾಯಚೂರಿನವರು, ಮತ್ತೊಬ್ಬರು ಬೆಂಗಳೂರು ಮೂಲದವರು. ಇನ್ನಿಬ್ಬರು ಹೈದರಾಬಾದ್‌ನವರು. ಐಎಸ್ ಉಗ್ರರ ವಶದಲ್ಲಿರುವ ಲಿಬಿಯಾದ ಸಿರ್ತ್‌ನಿಂದ 50 ಕಿ.ಮೀ ದೂರದ ಚೆಕ್‌ಪಾಯಿಂಟ್‌ನಿಂದ ಈ ನಾಲ್ಕು ಮಂದಿಯನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ಮೂರು ಮಂದಿ ಸರ್ತ್ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ. ಮತ್ತೊಬ್ಬರು ಸರ್ತ್ ವಿಶ್ವವಿದ್ಯಾಲಯದ ಜುಫ್ರಾ ಶಾಖೆಯ ಉದ್ಯೋಗಿ ಎಂಬುದು ಗೊತ್ತಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.
‘ಅಪಹರಣಗೊಂಡವರ ಕುಟುಂಬದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಅಪಹರಣಗೊಂಡ ನಾಲ್ವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಪ್ರಯತ್ನ ಮುಂದಿವರಿದಿದೆ’ ಎಂದು ಸ್ವರೂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.