ADVERTISEMENT

ಕಂಪ್ಯೂಟರ್‌ಗೆ ಕನ್ನ ಹಾಕಲು ಡಾರ್ಕ್‌ಬಾಟ್ ಹೊಂಚು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2016, 19:42 IST
Last Updated 2 ಫೆಬ್ರುವರಿ 2016, 19:42 IST
ಕಂಪ್ಯೂಟರ್‌ಗೆ ಕನ್ನ ಹಾಕಲು  ಡಾರ್ಕ್‌ಬಾಟ್ ಹೊಂಚು
ಕಂಪ್ಯೂಟರ್‌ಗೆ ಕನ್ನ ಹಾಕಲು ಡಾರ್ಕ್‌ಬಾಟ್ ಹೊಂಚು   

ಏನಿದು ಡಾರ್ಕ್‌ಬಾಟ್?
* ಆನ್‌ಲೈನ್ ವೈರಸ್
* ವಿಂಡೋಸ್‌ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಇರುವ ಡೆಸ್ಕ್‌ಟಾಪ್‌ ಮತ್ತು ಲ್ಯಾಪ್‌ಟಾಪ್‌ಗಳು ಗುರಿ
* ಈ ಬಗ್ಗೆ ಎಚ್ಚರದಿಂದ ಇರುವಂತೆ ಸೈಬರ್‌ ಭದ್ರತಾ ಸಂಸ್ಥೆ ಹೇಳಿದೆ

ಹಾನಿ
* ಪಾಸ್‌ವರ್ಡ್, ಬ್ರೌಸಿಂಗ್ ದತ್ತಾಂಶ, ವೈಯಕ್ತಿಕ ಮಾಹಿತಿ ಕಳವು
* ಹ್ಯಾಕರ್‌ಗಳು ಬಳಕೆದಾರರ ಕಂಪ್ಯೂಟರ್‌ ಮೇಲೆ ನಿಯಂತ್ರಣ ತೆಗೆದುಕೊಳ್ಳಲು  ರಿಮೋಟ್ ಸಾಧನದಂತೆ ಕೆಲಸ ಮಾಡುತ್ತದೆ
* ಕಂಪ್ಯೂಟರ್‌ನ ಕಾರ್ಯಾಚರಣೆ ವ್ಯವಸ್ಥೆಗೆ ಹಾನಿ

ದಾಳಿ ವಿಧಾನ
* ಸಾಮಾಜಿಕ ಜಾಲತಾಣಗಳ ಮೆಸೇಜ್‌ಗಳಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ
* ಅಪರಿಚಿತ ಇ–ಮೇಲ್‌ಗಳಲ್ಲಿ ಅಟ್ಯಾಚ್ ಆಗಿರುವ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದರಿಂದ
* ಯುಎಸ್‌ಬಿ ಡ್ರೈವ್‌ಗಳನ್ನು ‘ಆಟೊ ರನ್’ ಆಯ್ಕೆಯ ಮೂಲಕ ಚಾಲೂ ಮಾಡುವುದರಿಂದ
* ವೈರಸ್‌ ನಿರೋಧಕ ಸಾಫ್ಟ್‌ವೇರ್‌ಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ತನ್ನಿಂದ ತಾನೆ ಅಡಗಿಕೊಳ್ಳುವ  ವೈರಸ್

ಪರಿಹಾರ ಕ್ರಮ
ಈ ವೈರಸ್‌ನಿಂದ ಬಂದಿರುವ ಕಡತಗಳ ಕೋಡ್‌ ವಿನ್ಯಾಸ ಈ ರೀತಿ ಇರುತ್ತದೆ
cmd.exe, ipconfig.exe, regedit.exe, egsvr32.exe,  rundll32.exe, verclsid.exe, explorer.exe
* ಅಪರಿಚಿತ ಇ–ಮೇಲ್‌ಗಳಿಂದ ಡೌನ್‌ಲೋಡ್‌ ಮಾಡಿದ್ದ/ಆಗಿರುವ ಕಡತಗಳನ್ನು ಡಿಲೀಟ್‌ ಮಾಡುವುದು
* ವೈರಸ್‌ ಸೃಷ್ಟಿಸಿರುವ ಕಡತಗಳನ್ನು ಡಿಲೀಟ್‌ ಮಾಡುವುದು

ತಡೆ ಕ್ರಮ
* ಅಪರಿಚಿತ ಜಾಲತಾಣಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್  ಮಾಡದೇ ಇರುವುದು
* ಅಪರಿಚಿತ ಇ–ಮೇಲ್‌ಗಳಲ್ಲಿ ಇರುವ ಕಡತಗಳನ್ನು ಡೌನ್‌ಲೋಡ್ ಮಾಡದೇ ಇರುವುದು
* ವೈರಸ್ ನಿರೋಧಕ ಸಾಫ್ಟ್‌ವೇರ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು

* ಅಂತರ್ಜಾಲ ಸಂಪರ್ಕದ  ಸೆಟ್ಟಿಂಗ್‌ನಲ್ಲಿ ‘ಹೈ’  ‘ಸೆಕ್ಯುರಿಟಿ’ಪ್ರಮಾಣ ಆಯ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.