ADVERTISEMENT

ಕಿಮ್‌–ಮೂನ್‌ ಜೆ ಭೇಟಿ

ಏಜೆನ್ಸೀಸ್
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಕಿಮ್‌ ಜಾಂಗ್‌ ಉನ್‌ ಹಾಗೂ ಮೂನ್‌ ಜೆ ಇನ್‌ ಆಲಿಂಗನ
ಕಿಮ್‌ ಜಾಂಗ್‌ ಉನ್‌ ಹಾಗೂ ಮೂನ್‌ ಜೆ ಇನ್‌ ಆಲಿಂಗನ   

ಸೋಲ್‌: ಸಿಂಗಪುರದಲ್ಲಿ ಜೂನ್‌ 12ರಂದು ನಡೆಸಲು ಉದ್ದೇಶಿಸಿದ್ದ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದಿಢೀರನೇ ರದ್ದುಗೊಳಿಸಿದ ಬೆನ್ನಲ್ಲೇ ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು ಶನಿವಾರ ಮಾತುಕತೆ ನಡೆಸುವ ಮೂಲಕ ಅಚ್ಚರಿಗೆ ಮೂಡಿಸಿದ್ದಾರೆ.

ಕದನವಿರಾಮ ಘೋಷಣೆ ಮಾಡಿದ ನಂತರ ಸೇನೆಯನ್ನು ಹಿಂತೆಗೆದಿರುವ ಉತ್ತರ ಕೊರಿಯಾದ ಗಡಿ ಗ್ರಾಮ ಪನ್‌ಮುಂಜೋಮ್‌ನಲ್ಲಿ ಉಭಯ ನಾಯಕರು ಕೈ ಕುಲುಕಿ, ಪರಸ್ಪರ ಆಲಿಂಗನ ಮಾಡಿರುವ ಚಿತ್ರಗಳನ್ನು ದಕ್ಷಿಣ ಕೊರಿಯಾದ ಅಧ್ಯಕ್ಷರ ಕಚೇರಿ ‘ಬ್ಲ್ಯೂ ಹೌಸ್‌’ ಬಿಡುಗಡೆ ಮಾಡಿದೆ.

‘ಉಭಯ ನಾಯಕರು ಎರಡು ಗಂಟೆ ಮಾತುಕತೆ ನಡೆಸಿ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ಶಪಥ ಕೈಗೊಂಡರು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.