ಬೀಜಿಂಗ್ (ಪಿಟಿಐ): ಬ್ರೆಜಿಲ್, ರಷ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕಾ (ಬ್ರಿಕ್ಸ್) ದೇಶಗಳ ನಡುವೆ ವ್ಯಾಪಾರ ಸಂಬಂಧ ವೃದ್ಧಿಸಬೇಕೆಂಬ ಕರೆಯೊಂದಿಗೆ ‘ಬ್ರಿಕ್ಸ್’ ಶೃಂಗಸಭೆ ಕೊನೆಗೊಂಡ ಬೆನ್ನಲ್ಲೇ ಚೀನಾ ತನ್ನ ವ್ಯಾಪಾರ ವಹಿವಾಟಿನ ಬಗ್ಗೆ ವಿವರ ನೀಡಿದ್ದು, ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಮತ್ತು ಇತರ ಮೂರು ರಾಷ್ಟ್ರಗಳ ಜತೆಗಿನ ತನ್ನ ವ್ಯಾಪಾರದಲ್ಲಿ ಶೇ 45.8ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.
ಈ ವ್ಯಾಪಾರ ವಹಿವಾಟಿನ ಪ್ರಮಾಣ 59.9 ಶತಕೋಟಿ ಡಾಲರ್‌ಗೆ ಹೆಚ್ಚಿದೆ. ಚೀನಾದ ಸರಾಸರಿ ವ್ಯಾಪಾರ ವೃದ್ಧಿಗೆ ಹೋಲಿಸಿದರೆ ‘ಬ್ರಿಕ್ಸ್’ ಜತೆಗಿನ ವ್ಯಾಪಾರದಲ್ಲಿ ಶೇ 16.3ರಷ್ಟು ಹೆಚ್ಚಳವಾಗಿದೆ ಎಂದು ಚೀನಾದ ಕಸ್ಟಮ್ಸ್ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.