ADVERTISEMENT

ಪಾಕ್‌ ಮೂಲದ ಬ್ರಿಟಿಷ್‌ ಸಂಸದೆ ಎದುರೇ ವ್ಯಕ್ತಿಯ ಲೈಂಗಿಕ ದುರ್ವರ್ತನೆ

ಏಜೆನ್ಸೀಸ್
Published 13 ಏಪ್ರಿಲ್ 2019, 4:29 IST
Last Updated 13 ಏಪ್ರಿಲ್ 2019, 4:29 IST
   

ಲಂಡನ್‌: ಪಾಕಿಸ್ತಾನ ಮೂಲದ ಬ್ರಿಟಿಷ್‌ ಸಂಸತ್‌ ಸದಸ್ಯೆ ನಾಜ್‌ ಶಾ ಅವರು ಕಳೆದ ವಾರ ತೀವ್ರ ಮುಜುಗರ ಸನ್ನಿವೇಶ ಎದುರಿಸಿದ್ದಾರೆ. ಲಂಡನ್‌ನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಎದುರೇ ಕುಳಿತಿದ್ದ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಬ್ರಿಟನ್‌ನ ಲೇಬರ್‌ ಪಕ್ಷದ ನಾಯಕಿಯಾಗಿರುವ ಅವರು ಏಪ್ರಿಲ್‌ 1ರಂದು ತಾವು ಎದುರಿಸಿದ ಸನ್ನಿವೇಶವನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ.

ಏ.1ರಂದು ಸೆಂಟ್ರಲ್‌ ಲಂಡನ್‌ನ ವೈಟ್‌ ಹಾಲ್‌ಗೆ ತೆರಳಲು ಬಸ್‌ ಏರಿದ್ದ ನಾಜ್‌ ಶಾ ಅವರು ತಮ್ಮೆದುರು ನಡೆದ ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ನಾನು ಬಸ್‌ ಏರುತ್ತಲೇ ನನ್ನೆದುರು ಕುಳಿತಿದ್ದ ವ್ಯಕ್ತಿ ಹಸ್ತಮೈಥುನ ಮಾಡಿಕೊಳ್ಳಲಾರಂಭಿಸಿದ. ನನ್ನೆದುರೇ ಕುಳಿತಿದಿದ್ದ ವ್ಯಕ್ತಿಯ ವರ್ತನೆಯಿಂದ ನನಗೇನು ಮಾಡಬೇಕು ಎಂಬುದೇ ತೋಚಲಿಲ್ಲ. ಈ ಕುರಿತು ನಾನು ಬಸ್‌ ಚಾಲಕನಿಗೆ ತಿಳಿಸಿದೆ. ಕೂಡಲೇ ವ್ಯಕ್ತಿ ಬಸ್‌ ಇಳಿದು ಹೋದ.ಘಟನೆ ನನ್ನನ್ನು ದಿಗ್ಭ್ರಾಂತಗಗೊಳಿಸಿದೆ. ಅಲ್ಲದೆ, ಖಿನ್ನಳನ್ನಾಗಿಸಿದೆ. ಈ ಬಗ್ಗೆ ನಾನು ಪೊಲೀಸರು ಮತ್ತು ಸಾರಿಗೆ ಇಲಾಖೆಗೆ ತಿಳಿಸಿಯೂ ನಾನು ಖಿನ್ನ ಭಾವದಲ್ಲೇ ಇದ್ದೇನೆ,’ ಎಂದು ಅವರು ಹೇಳಿಕೊಂಡಿದ್ದಾರೆ.

ADVERTISEMENT

‘ನಾನು ಎಂದೂ ಇಂಥ ಪರಿಸ್ಥಿತಿ ಎದುರಿಸಿರಲಿಲ್ಲ. ಮಹಿಳೆಯರಿರುವ ಸ್ಥಳಗಳಲ್ಲಿ ಇಂಥ ದುಷ್ಕೃತ್ಯಗಳು ನಡೆಯಬಾರದು,' ಎಂದು ಹೇಳಿರುವ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಯೂಟ್ಯೂಬ್‌ ವಿಡಿಯೋವನ್ನೂ ಬಿಡುಗಡೆ ಮಾಡಿದ್ದಾರೆ. ‘ ಲೈಂಗಿಕ ದುರ್ವರ್ತನೆಗೆ ಸಾಕ್ಷಿಯಾಗುವ ಶೇ.90ರಷ್ಟು ಮಹಿಳೆಯರು ಪೊಲೀಸರಿಗೆ ವರದಿ ಮಾಡಲು ಹಿಂಜರಿಯುತ್ತಾರೆ. ಒಂದು ವೇಳೆ ಯಾವುದೇ ಮಹಿಳೆಗೆ ಇಂಥ ತೊಂದರೆಯಾಗಿದ್ದರೆ ಅವರು ಕೂಡಲೇ ಎಲ್ಲಿ ಏನಾಯಿತು ಎಂಬುದರ ಕುರಿತು61016 ಸಂದೇಶ ರವಾನಿಸುವಂತೆಯೂ ಅಥವಾ 101ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆಯೂ ಆ ಮೂಲಕ ದುರ್ವರ್ತನೆ ತಡೆಗೆ ನೆರವಾಗಬೇಕಾಗಿಯೂ,’ ಅವರು ಕೋರಿದ್ದಾರೆ. ಈ ಸಂಬಂಧ ಟ್ವೀಟ್‌ ಕೂಡ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.