ADVERTISEMENT

ಪ್ರಾಚೀನ ಪಲ್‌ಮೈರಾ ಉಗ್ರರ ವಶ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:10 IST
Last Updated 21 ಮೇ 2015, 19:10 IST
ಪ್ರಾಚೀನ ಪಲ್‌ಮೈರಾ ಉಗ್ರರ ವಶ
ಪ್ರಾಚೀನ ಪಲ್‌ಮೈರಾ ಉಗ್ರರ ವಶ   

ಡಮಾಸ್ಕಸ್‌ (ಎಪಿ): ಮಧ್ಯ ಸಿರಿಯಾದ ನಗರ ಪಲ್‌ಮೈರಾವನ್ನು ವಶಪಡಿಸಿಕೊಂಡಿರುವ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಗುರುವಾರ ಬೆಳಗಿನ ಜಾವದ ಹೊತ್ತಿಗೆ ಪಲ್‌ಮೈರಾ ಯುನೆಸ್ಕೊ ವಿಶ್ವಪಾರಂಪರಿಕ ತಾಣವನ್ನೂ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ನೆರೆಯ ಇರಾಕ್‌ನಲ್ಲಿರುವ ಪಾರಂಪರಿಕ ಸ್ಮಾರಕಗಳನ್ನು ನಾಶ ಮಾಡಿದ ರೀತಿಯಲ್ಲಿಯೇ ಪಲ್‌ಮೈರಾ ಸ್ಮಾರಕಗಳನ್ನೂ ಉಗ್ರರು ಧ್ವಂಸಗೊಳಿಸುವ ಭೀತಿ ಎದುರಾಗಿದೆ.

ಪಲ್‌ಮೈರಾ ನಗರ ಉಗ್ರರ ವಶವಾಗುತ್ತಿದ್ದಂತೆಯೇ ಸಿರಿಯಾ ಯೋಧರು ಅಲ್ಲಿಂದ ಪರಾರಿಯಾಗಿದ್ದಾರೆ. ನಗರದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಸರ್ಕಾರದ ಪರವಾಗಿರುವ ಸುದ್ದಿ ವಾಹಿನಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.