ನ್ಯೂಯಾರ್ಕ್ (ಪಿಟಿಐ): ಫೋಬ್ಸ್ ನಿಯತಕಾಲಿಕದ 20 ಜನ ವಿಶ್ವದ ಅತ್ಯಂತ ಪ್ರಭಾವಿಗಳ ಇತ್ತೀಚಿನ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್‌ಸಿಂಗ್ ಸ್ಥಾನ ಪಡೆದಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ಮುಅಮ್ಮರ್ ಗಡಾಫಿ ಮತ್ತು ಒಸಾಮ ಬಿನ್ ಲಾಡೆನ್ ಸದ್ದಡಗಿಸುವಲ್ಲಿ ಅಮೆರಿಕ ಯಶಸ್ಸು ಸಾಧಿಸಿದ್ದರಿಂದ ಒಬಾಮಗೆ ಈ ಪಟ್ಟ ದೊರಕಿದೆ. ಸೋನಿಯಾ ಗಾಂಧಿ 11ನೇ ಸ್ಥಾನ ಪಡೆದಿದ್ದು, ಮನಮೋಹನ್‌ಸಿಂಗ್ 19ನೇ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.