ADVERTISEMENT

ಬೆಂಗಳೂರಿನ ಅಲೋಕ್‌ ಶೆಟ್ಟಿ ‘ನಾಳಿನ ನಾಯಕ’: ಟೈಮ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ನ್ಯೂಯಾರ್ಕ್‌ (ಪಿಟಿಐ): ಬೆಂಗಳೂ­ರಿನ ಸ್ವಯಂ ಸೇವಾ ಸಂಸ್ಥೆ ಪರಿ­­ಣಾಮ ಪ್ರತಿಷ್ಠಾನದ ವಾಸ್ತು­ಶಿಲ್ಪಿ ಅಲೋಕ್‌ ಶೆಟ್ಟಿ (28) ಅವ­ರನ್ನು ಅಮೆರಿಕದ ಟೈಮ್‌ ನಿಯ­ತ­ಕಾಲಿಕೆಯು ‘ನಾಳಿನ ನಾಯಕ’ ಎಂದು ಹೆಸರಿಸಿದೆ.

ಕೊಳಚೆ ವಾಸಿಗಳಿಗೆ ಮತ್ತು ಭಾರಿ ಮಳೆ, ಪ್ರವಾಹದಲ್ಲಿ ಬಳಸಬಹುದಾ­ದ ಮನೆಗಳನ್ನು ನಿರ್ಮಾಣ ಮಾಡಿದ್ದಕ್ಕಾಗಿ ಶೆಟ್ಟಿ ಅವರಿಗೆ ಈ ಗೌರವ ಸಂದಿದೆ. ಭಾರಿ ಮಳೆ, ಪ್ರವಾಹದಲ್ಲಿ ಬಳ­ಸಲು ಬಿದಿರು, ಮರದಿಂದ ರೂ 18 ಸಾವಿರ ವೆಚ್ಚ­ದಲ್ಲಿ ಶೆಟ್ಟಿ ಮನೆ­ಗಳನ್ನು ನಿರ್ಮಿಸಿದ್ದಾರೆ. ಇದನ್ನು ಕೇವಲ ನಾಲ್ಕು ಗಂಟೆಗಳಲ್ಲಿ ನಿರ್ಮಾಣ ಮಾಡ­ಬಹುದೆಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.