ವಾಷಿಂಗ್ಟನ್ (ಪಿಟಿಐ): ಭೂಮಿಗೆ ಅತ್ಯಂತ ಸಮೀಪದ ಹೋಲಿಕೆ ಇರುವ ಹಾಗೂ ಮನುಷ್ಯನ ವಾಸಕ್ಕೆ ಯೋಗ್ಯವಾಗಿದೆ ಎಂದು ಊಹಿಸಲಾಗಿರುವ ಎರಡು ಹೊಸ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ (ನ್ಯಾಷನಲ್ ಏರೋನಾಟಿಕ್ ಅಂಡ್ ಸ್ಪೇಸ್ ಅಡ್ಮಿಸ್ಟ್ರೇಷನ್) ಕೆಪ್ಲರ್ ಮಿಷನ್‌ನ ವಿಲಿಯಂ ಬೊರೂಕಿ ನೇತೃತ್ವದ ಎಮ್ಸ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಈ ಗ್ರಹಗಳನ್ನು ಪತ್ತೆ ಹಚ್ಚಿದೆ.
ಸೂರ್ಯನ ಹೋಲಿಕೆ ಇರುವ ಕೆಪ್ಲರ್- 62 ಎನ್ನುವ ನಕ್ಷತ್ರದ ಸುತ್ತ ಸುತ್ತುತ್ತಿರುವ ಈ ಎರಡು ಹೊಸ ಗ್ರಹಗಳು, ಭೂಮಿಯಿಂದ 1,200 ಜ್ಯೋತಿರ್ವರ್ಷಗಳಷ್ಟು ದೂರ ಇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
`ಹೊಸ ಗ್ರಹಗಳ ಪತ್ತೆಯು ನಮ್ಮೆಲ್ಲರ ಸಂಘಟಿತ ಪ್ರಯತ್ನವಾಗಿದ್ದು, ಇಂತಹ ಮಹತ್ತರ ಸಂಶೋಧನೆಗಳತ್ತ ಇಡೀ ವಿಜ್ಞಾನಿಗಳ ಸಮೂಹ ಗಮನ ಹರಿಸಬೇಕಾಗಿದೆ' ಎಂದು ವಿಲಿಯಂ ಬೊರೂಕಿ ಹೇಳಿದ್ದಾರೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವವಾದ ಈ ಹೊಸ ಸಂಶೋಧನಾ ಅಧ್ಯಯನವು `ಸೈನ್ಸ್ ಎಕ್ಸ್‌ಪ್ರೆಸ್' ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.