ADVERTISEMENT

ಮಂಗಳಗ್ರಹಕ್ಕೆ ಹೆಲಿಕಾಪ್ಟರ್‌: ನಾಸಾ ಯೋಜನೆ

ಏಜೆನ್ಸೀಸ್
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಮಂಗಳ ಗ್ರಹಕ್ಕೆ ಕಳುಹಿಸಲು ಉದ್ದೇಶಿಸಿರುವ ಹೆಲಿಕಾಪ್ಟರ್‌ ಮಾದರಿ
ಮಂಗಳ ಗ್ರಹಕ್ಕೆ ಕಳುಹಿಸಲು ಉದ್ದೇಶಿಸಿರುವ ಹೆಲಿಕಾಪ್ಟರ್‌ ಮಾದರಿ   

ಥಂಪಾ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’, 2020ರಲ್ಲಿ ಮಂಗಳಗ್ರಹಕ್ಕೆ ಮೊದಲ ಹೆಲಿಕಾಪ್ಟರ್‌ ಕಳುಹಿಸುವ ಯೋಜನೆ ರೂಪಿಸಿದೆ.

ಈ ಹೆಲಿಕಾಪ್ಟರ್‌ ಮಾನವರಹಿತವಾಗಿದ್ದು, ಡ್ರೋಣ್‌ ಮಾದರಿಯಲ್ಲಿದೆ. ಮಂಗಳ ಗ್ರಹದ ಕುರಿತ ಮಾಹಿತಿಯನ್ನು ಮತ್ತಷ್ಟು ತಿಳಿದುಕೊಳ್ಳಲು ‘ನಾಸಾ’ ಈ ಯೋಜನೆ ಕೈಗೊಂಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಇದಕ್ಕೆ ‘ದಿ ಮಾರ್ಸ್ ಹೆಲಿಕಾಪ್ಟರ್’ ಎಂದು ಹೆಸರಿಡಲಾಗಿದ್ದು, 1.8 ಕಿಲೋ ಗ್ರಾಂ ತೂಕ ಇದೆ. ಇದರ ಮುಖ್ಯ ಭಾಗವು ಒಂದು ಚೆಂಡಿನ ಗಾತ್ರದಲ್ಲಿ ಇರಲಿದೆ.

ADVERTISEMENT

‘2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ಕಳುಹಿಸಲಿರುವ ಗಗನನೌಕೆ ಜೊತೆಗೆ ಈ ಹೆಲಿಕಾಪ್ಟರ್‌ ಅನ್ನು ಕಳುಹಿಸಲಾಗುವುದು. ಅದು 2021ರ ಫೆಬ್ರುವರಿಯಲ್ಲಿ ಇಳಿಯಲಿದೆ.

ಇನ್ನೊಂದು ಗ್ರಹದಲ್ಲಿ ಹೆಲಿಕಾಪ್ಟರ್‌ ಹಾರಾಟ ನಡೆಸುವ ಯೋಚನೆಯೇ ರೋಮಾಂಚನಕಾರಿಯಾದುದು. ಹಲವು ಪ್ರಥಮಗಳನ್ನು ಸಾಧಿಸಿದ ಹೆಮ್ಮೆ ‘ನಾಸಾ’ದ್ದಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರೈಡನ್‌ಸ್ಟೈನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.