ADVERTISEMENT

ಮಂಗಳನ ಅಂಗಳಕ್ಕೆ ಏರ ಬಯಸುವಿರಾ?

​ಪ್ರಜಾವಾಣಿ ವಾರ್ತೆ
Published 2 ಮೇ 2013, 19:59 IST
Last Updated 2 ಮೇ 2013, 19:59 IST

ವಾಷಿಂಗ್ಟನ್ (ಪಿಟಿಐ): ತಮ್ಮ ಹೆಸರನ್ನು ಹಾಗೂ ಪ್ರತಿಭೆಯ ಛಾಪನ್ನು ಮಂಗಳನ ಅಂಗಳಕ್ಕೆ ಏರಿಸಲು ಸಾರ್ವಜನಿಕರಿಗೊಂದು ಸುವರ್ಣಾವಕಾಶ!

ನಾಸಾ ಇಂತಹ ಅವಕಾಶ ಒದಗಿಸಿದೆ. ಮಂಗಳನ ವಾತಾವರಣದ ಅಧ್ಯಯನಕ್ಕಾಗಿ ಗಗನನೌಕೆಯೊಂದನ್ನು ಅದು ಉಡಾಯಿಸುತ್ತಿದ್ದು, ಅದರೊಂದಿಗೆ ರವಾನಿಸುವ ಡಿವಿಡಿಯಲ್ಲಿ ಆಸಕ್ತರ ಹೆಸರು, ಹಾಯ್ಕು ಮಾದರಿ ಸಣ್ಣ ಕವನಗಳು ಮತ್ತು ವೈಯಕ್ತಿಕ ಸಂದೇಶಗಳನ್ನು ಅಡಕಗೊಳಿಸಲಿದೆ.  ಸಾರ್ವಜನಿಕರು ತಮ್ಮ ಹೆಸರು, ಕವನ , ಸಂದೇಶಗಳನ್ನು ಕಳುಹಿಸಬಹುದು. ಡಿವಿಡಿಯಲ್ಲಿ ಆಸಕ್ತರ ಹೆಸರು ಮತ್ತು ಸಂದೇಶಗಳನ್ನು ಅಡಕಗೊಳಿಸಲು ನಾಸಾ ಯಾವುದೇ ಮಿತಿ ಹಾಕಿಕೊಂಡಿಲ್ಲ. ಅಂತರ್ಜಾಲದ ಮೂಲಕ ಇವನ್ನು ಕಳುಹಿಸಲು ಜುಲೈ 1ರವರೆಗೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.