ಅತ್ಯಾಧುನಿಕ ಗಣಿತೀಯ ವಿಧಾನಗಳನ್ನು ಬಳಸಿ ಭಿನ್ನ ಹಂತಗಳಲ್ಲಿ ಭೌತವಸ್ತುಗಳ ಅಧ್ಯಯನದ ಸಾಧ್ಯತೆಯನ್ನು ಹೊರ ತಂದಿರುವ ವಿಜ್ಞಾನಿಗಳಿಗೆ 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ.
ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿತ್ತಿರುವ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಹಂಚಿಕೆಯಾಗಿದೆ.
ವಿಜ್ಞಾನಿಗಳ ಪರಿಚಯ:
* ಡೇವಿಡ್ ಜೆ. ಥೌಲೆಸ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಅಮೆರಿಕ(ಪ್ರಶಸ್ತಿಯ ಅರ್ಧ ಭಾಗ)
ಜನನ: 1934, ಬರ್ಸ್ಡನ್, ಯು.ಕೆ.
* ಎಫ್.ಡಂಕನ್ ಎಂ.ಹಲ್ಡೇನ್, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಅಮೆರಿಕ
ಜನನ: 1951, ಲಂಡನ್
* ಜೆ.ಮೈಕೆಲ್ ಕೋಸ್ಟೆರ್‌ಲಿಟ್ಸ್, ಬ್ರೌನ್ ವಿಶ್ವವಿದ್ಯಾಲಯ, ಅಮೆರಿಕ
ಜನನ: 1942, ಅಬೆರ್ದಿನ್, ಯು.ಕೆ
ಸಂಶೋಧನೆ: ಭಿನ್ನ ಹಂತಗಳಲ್ಲಿ ಆಕೃತಿಯ ಜ್ಯಾಮಿತೀಯ ಲಕ್ಷಣಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ (ಟೊಪಾಲಜಿಕಲ್ ಫೇಸ್) ಭೌತವಸ್ತು ಹಾಗೂ ಪರಿವರ್ತನೆ ಗಳ ಸೈದ್ಧಾಂತಿಕ ಸಂಶೋಧನೆಗಾಗಿ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.