ಲಂಡನ್ (ಪಿಟಿಐ):ಬ್ರಿಟನ್ ರಾಣಿ ಎಲಿಜಬೆತ್– 2 ಅವರ 93ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಭಾರತೀಯ ಮೂಲದ 30 ಮಂದಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಶೈಕ್ಷಣಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಅವಕಾಶ ಒದಗಿಸಲಾಗಿದೆ. ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ನೇತ್ರಶಾಸ್ತ್ರ ಮತ್ತು ವಿಷುವಲ್ ವಿಜ್ಞಾನ ವಿಷಯದ ಪ್ರಾಧ್ಯಾಪಕರಾಗಿರುವಹರ್ಮಿಂದರ್ ಸಿಂಗ್ ದುವಾ ಅವರನ್ನು ಆಹ್ವಾನಿಸಲಾಗಿದೆ. ಇವರು,ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗೆ ‘ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ (ಸಿಬಿಇ) ಕಮಾಂಡರ್ ಗೌರವಕ್ಕೂ ಪಾತ್ರರಾಗಿದ್ದಾರೆ.
ಉದ್ಯಮಿಗಳಾದ ಭರತ್ ಕುಮಾರ್ ಹಂಸರಾಜ್ ಷಾ, ಸಮೀರ್ ಷಾ,ಅರ್ನಬ್ ದತ್,ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವರೀನಾ ರೇಂಜರ್, ವೀಲ್‌ಚೇರ್ ಬಾಸ್ಕೆಟ್ ಬಾಲ್ ಕೋಚ್ ಹರ್‌ಜೀತ್ ಸಿಂಗ್ ಭಾನಿಯಾ, ಶೈಕ್ಷಣಿಕ ತಜ್ಞ ಅಮರ್ಜೀತ್ ಕೌರ್ ಚೀಮಾ,ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಸಂಸ್ಥಾಪಕ ಮತ್ತು ನಿರ್ದೇಶಕರಾಜೀಂದರ್ ಸಾಹ್ನಿ ಅವರಿಗೂ ಆಹ್ವಾನ ನೀಡಲಾಗಿದೆ. ಒಟ್ಟು 1,073 ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.